
ದುಬೈ: ಏಶಿಯಾ ಕಪ್ ಕ್ರಿಕೆಟ್ ಟ್ವೆಂಟಿ-20 ಮಾದರಿಯ ಪಂದ್ಯಾವಳಿಯಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಸೂಪರ್-4 ಘಟ್ಟದ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ಸಾಯಂಕಾಲ 8 ಕ್ಕೆ ಪಂದ್ಯ ಆರಂಭವಾಗಲಿದೆ. ಗುಂಪು ಲೀಗ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಸುಲಭವಾಗಿ ಮಣಿಸಿತ್ತು. ಬಲಾಢ್ಯ ಭಾರತ ತಂಡ ಪಂದ್ಯ ಗೆಲ್ಲುವ ಫೆವರಿಟ್ ಆಗಿದ್ದು, ಸೂಪರ್-4 ರ ಹಂತದಲ್ಲಿ ಶುಭಾರಂಭಕ್ಕಾಗಿ ಸೂರ್ಯ ಕುಮಾರ್ ಪಡೆ ಕಾಯ್ದು ಕುಳಿತಿದೆ.
ಓಮಾನ್ ವಿರುದ್ಧದ ಪಂದ್ಯದಲ್ಲಿ ಪ್ರಯೋಗಕ್ಕೆ ಒತ್ತು ಕೊಟ್ಟ ಭಾರತ ಪ್ರಮುಖ ವೇಗಿ ಬೂರ್ಮಾ ಅವರನ್ನು ಕೈ ಬಿಟ್ಟು ಹರ್ಷಿತ ರಾಣಾ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಆಡಿಸಿತ್ತು. ಇಂದು ಬೂರ್ಮಾ ಮತ್ತೇ ಕಣಕ್ಕೆ ಇಳಿಯಲಿದ್ದು, ಸೂರ್ಯಕುಮಾರ್ ಮತ್ತೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿಯಲಿದ್ದಾರೆ.




