ಅಬುದಾಬಿ: ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಗುಂಪು ಲೀಗ್ ಪಂದ್ಯಗಳ ಪೈಕಿ ಕಡೆಯ ಪಂದ್ಯದಲ್ಲಿ ಇಂದು ಭಾರತ ತಂಡ ಓಮಾನ್ ತಂಡವನ್ನು ಎದುರಿಸಲಿದ್ದು, ಭಾರತದ ವೇಗಿ ಬೂಮ್ರಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಶೇಖ್ ಜಯೀದ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೂ ಕೇವಲ ಇದು ಅಭ್ಯಾಸ ಪಂದ್ಯವಾಗಿದೆ. ಪಂದ್ಯಾವಳಿಯ ಸೂಪರ್-4 ರ ತಂಡಗಳ ನಿರ್ಧಾರ ಈಗಾಗಲೇ ಆಗಿದ್ದೇ ಇದಕ್ಕೆ ಕಾರಣ. ಭಾರತ ಈ ಪಂದ್ಯವನ್ನುಗೆದ್ದರೆ ಎ, ಗುಂಪಿನಲ್ಲಿ ಅಗ್ರಸ್ಥಾನ ಪಡೆಯುತ್ತದೆ.




