Ad imageAd image

ಪಾಕಿಸ್ತಾನ ವಿರುದ್ಧ ಗೆದ್ದ ಭಾರತಕ್ಕೆ ಏಶಿಯಾ ಕಪ್ ಕಿರೀಟ

Bharath Vaibhav
ಪಾಕಿಸ್ತಾನ ವಿರುದ್ಧ ಗೆದ್ದ ಭಾರತಕ್ಕೆ ಏಶಿಯಾ ಕಪ್ ಕಿರೀಟ
WhatsApp Group Join Now
Telegram Group Join Now

———————————–ತಿಲಕ್ ವರ್ಮಾ ಪಂದ್ಯ ಶ್ರೇಷ್ಠ: ಅಭಿಷೇಕ ಶರ್ಮಾ ಸರಣಿ ಶ್ರೇಷ್ಠ

ದುಬೈ: ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ಏಶಿಯಾ ಕಪ್ ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಏಶಿಯಾ ಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು.

ಸೂರ್ಯ ಕುಮಾರ್ ಬಳಗ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಈ ಬಾರಿ ಪ್ರಯಾಸದಿಂದ ಪಂದ್ಯ ಗೆಲ್ಲಬೇಕಾಯಿತು. ಲೀಗ್ ಹಾಗೂ ಸೂಪರ್-4 ರ ಪಂದ್ಯದಲ್ಲಿ ಸುಲಭವಾಗಿ ಸೋತಿದ್ದ ಪಾಕಿಸ್ತಾನ ಈ ಬಾರಿ ಭಾರತಕ್ಕೆ ಪ್ರತಿರೋಧ ತೋರಿದರೂ ಕೊನೆಗೂ ಸೋಲೊಪ್ಪಿಕೊಂಡಿತು.

ಈ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದ ಭಾರತ ಒಂದೇ ಒಂದು ಪಂದ್ಯ ಸೋಲದೇ ಪ್ರಶಸ್ತಿ ಗೆದ್ದಿದ್ದು ಕೂಡ ವಿಶೇಷವಾಗಿತ್ತು. ತಿಲಕ್ ವರ್ಮಾ ಪಂದ್ಯ ಶ್ರೇಷ್ಠ ಹಾಗೂ ಅಭಿಷೇಕ ಶರ್ಮಾ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಕೋರ್ ವಿವರ

ಪಾಕಿಸ್ತಾನ 19.1 ಓವರುಗಳಲ್ಲಿ 146

( ಸಾಹಿಬ್ಜಾದಾ ಪರ್ಹಾನ್ 57 ( 38 ಎಸೆತ, 5 ಬೌಂಡರಿ, 3 ಸಿಕ್ಸರ್), ಫಕ್ಕರ್ ಜಮಾನ್ 46 ( 35 ಎಸೆತ, 2 ಬೌಂಡರಿ, 2 ಸಿಕ್ಸರ್) ಸೈಯಮ್ ಅಯುಬ್ 14 ( 11 ಬೌಂಡರಿ, 2 ಸಿಕ್ಸರ್) ಕುಲದೀಪ್ ಯಾದವ್ 30 ಕ್ಕೆ 4, ಬೂಮ್ರಾ 25 ಕ್ಕೆ 2, ಅಕ್ಷರ ಪಟೇಲ್ 26 ಕ್ಕೆ 2, ವರುಣ್ ಚರ್ಕವರ್ತಿ 30 ಕ್ಕೆ 2)

ಭಾರತ 19.4 ಓವರುಗಳಲ್ಲಿ 5 ವಿಕೆಟ್ ಗೆ 150

ತಿಲಕ್ ವರ್ಮಾ ಅಜೇಯ 69 ( 53 ಎಸೆತ, 3 ಬೌಂಡರಿ, 4 ಸಿಕ್ಸರ್) ಶಿವಂ ದುಬೈ 33 ( 22 ಎಸೆತ, 2 ಬೌಂಡರಿ, 2 ಸಿಕ್ಸರ್)

ಸಂಜು ಸ್ಯಾಮ್ಸನ್ 24 ( 21 ಎಸೆತ, 2 ಬೌಂಡರಿ, 1 ಸಿಕ್ಸರ್)

ಪಂದ್ಯ ಶ್ರೇಷ್ಠ: ತಿಲಕ್  ವರ್ಮಾ, ಸರಣಿ ಶ್ರೇಷ್ಠ: ಅಭಿಷೇಕ ಶರ್ಮಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!