Ad imageAd image

ಏಶಿಯಾ ಕಪ್ ಸೂಪರ್-4 ಹಂತ: ಶ್ರೀಲಂಕಾ ವಿರುದ್ಧ ಗೆದ್ದ ಪಾಕಿಸ್ತಾನ

Bharath Vaibhav
ಏಶಿಯಾ ಕಪ್ ಸೂಪರ್-4 ಹಂತ: ಶ್ರೀಲಂಕಾ ವಿರುದ್ಧ ಗೆದ್ದ ಪಾಕಿಸ್ತಾನ
WhatsApp Group Join Now
Telegram Group Join Now

—————————————————28 ರಂದು ಭಾರತ- ಪಾಕ್ ಫೈನಲ್ ಸಾಧ್ಯತೆ

ಅಬುದಾಬಿ: ಪಾಕಿಸ್ತಾನ ಕ್ರಿಕೆಟ್ ತಂಡವು ಇಲ್ಲಿ ನಡೆದ ಏಶಿಯಾ ಕಪ್ ಪಂದ್ಯಾವಳಿಯ ಸೂಪರ್-4 ರ ಹಂತದಲ್ಲಿ ಶ್ರೀಲಂಕಾ ತಂಡದ ವಿರುದ್ಧ 5 ವಿಕೆಟ್ ಗಳಿಂದ ಜಯಗಳಿಸಿತು.

ಶೇಖ ಜಯೀದ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಜಯಿಸುವ ಮೂಲಕ ಪಾಕಿಸ್ತಾನ ತಂಡ ಫೈನಲ್ ಗೆ ಏರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.  ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 133 ರನ್ ಗಳಿಸಿತು. ಪ್ರತಿಯಾಗಿ ಆಡಿದ ಪಾಕಿಸ್ತಾನ ತಂಡ 18 ಓವರುಗಳಲ್ಲಿ 5 ವಿಕೆಟ್ ಗೆ 138 ರನ್ ಗಳಿಸಿತು.

ಈ ಗೆಲುವಿನೊಂದಿಗೆ ಪಾಕಿಸ್ತಾನ ಸೂಪರ್- 4 ರಲ್ಲಿ ಮೂರನೇ ಸ್ಥಾನಕ್ಕೆ ಬಂದಿದ್ದು, ಬಾಂಗ್ಲಾ ವಿರುದ್ಧ ತನ್ನ ಕಡೆಯ ಸೂಪರ್-4ರ ಪಂದ್ಯ ಗೆದ್ದರೆ ಇನ್ನೊಂದೆಡೆ ಭಾರತ ಬಾಂಗ್ಲಾ ವಿರುದ್ಧ ಗೆದ್ದರೆ ಭಾರತ ಪಾಕ್- ಫೈನಲ್ ಪಂದ್ಯ 28 ರಂದು ನಡೆಯುವ ಎಲ್ಲ ಸಾಧ್ಯತೆಗಳು ಇವೆ.

ಸ್ಕೋರ್ ವಿವರ:

ಶ್ರೀಲಂಕಾ 20 ಓವರುಗಳಲ್ಲಿ 8 ವಿಕೆಟ್ ಗೆ 133

ಕಮಿಂಡು ಮೆಂಡಿಸ್  50 ( 44 ಎಸೆತ, 3 ಬೌಂಡರಿ, 2 ಸಿಕ್ಸರ್) ಅಸಲಂಕಾ 20 ( 19 ಎಸೆತ, 2 ಬೌಂಡರಿ, 1 ಸಿಕ್ಸರ್)

ಶಾಹೀನ್ ಅಪ್ರಿಧಿ 28 ಕ್ಕೆ 3, ಹುಸೇನ್ ತಲಾಠ 18 ಕ್ಕೆ 2)

ಪಾಕಿಸ್ತಾನ 18 ಓವರುಗಳಲ್ಲಿ 5 ವಿಕೆಟ್ ಗೆ 138

ಮೊಹ್ಮದ ನವಾಜ್ ಅಜೇಯ 38 ( 24 ಎಸೆತ, 3 ಬೌಂಡರಿ, 3 ಸಿಕ್ಸರ್) ಹುಸೇನ್ ತಲಾಠ 32 (30 ಎಸೆತ, 4 ಬೌಂಡರಿ) ವಾನಿಂದು ಹಸರಂಗ 27 ಕ್ಕೆ 2)

————————————————————————ಪಂದ್ಯ ಶ್ರೇಷ್ಠ: ಹುಸೇನ್ ತಲಾಠ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!