ಅಬುದಾಬಿ: ಇಲ್ಲಿ ನಡೆಯುತ್ತಿರುವ ಏಶಿಯಾ ಕಪ್ ಟ್ವೆಂಟಿ- 20 ಮಾದರಿಯ ಪಂದ್ಯಾವಳಿಯ 5 ನೇ ಲೀಗ್ ಪಂದ್ಯದಲ್ಲಿ ಇಂದು ಶ್ರೀಲಂಕಾ ತಂಡವು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಬಿ, ಗುಂಪಿನಲ್ಲಿ ಸ್ಥಾನ ಪಡೆದಿರುವ ಶ್ರೀಲಂಕಾ ತಂಡವು ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದು, ಪಾಯಿಂಟ್ ಖಾತೆ ತೆರೆಯಬೇಕಿದೆ. ಇನ್ನೊಂದೆಡೆ ಇದೇ ಗುಂಪಿನಲ್ಲಿ ಸ್ಥಾನ ಹೊಂದಿರುವ ಬಾಂಗ್ಲಾ ತನ್ನ ಮೊದಲ ಪಂದ್ಯವನ್ನು ಗೆದ್ದು 2 ಅಂಕಗಳನ್ನು ಸಂಪಾದಿಸಿದೆ.




