ಕೊಪ್ಪಳ : ಇತ್ತೀಚೆಗೆ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಗಳು ಜಾಸ್ತಿಯಾಗಿದೆ. ಕುಡಿದ ಮತ್ತಿನ ಪ್ರಯಾಣಿಕನೊಬ್ಬ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಗಂಗಾವತಿ ಡಿಪೋದ ನಿರ್ವಾಹಕ ಹನುಮಪ್ಪ ಅವರ ಮೇಲೆ ವಿಜಯನಗರ ಜಿಲ್ಲೆಯ ಶ್ರೀಧರ್ ಹಲ್ಲೆ ಮಾಡಿದ್ದಾನೆ.ಬಸ್ ಟಿಕಟ್ ದರ ಹೆಚ್ಚಳ ವಿಚಾರವಾಗಿ ನಿರ್ವಾಹಕನ ಜೊತೆ ಗಲಾಟೆ ಮಾಡಿ ಹಲ್ಲೆ ಮಾಡದ್ದು, ಹನುಮಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಿಂದ ಗಂಗಾವತಿಗೆ ಹೋಗುತ್ತಿದ್ದ ಬಸ್ ಅನ್ನು ಶ್ರೀಧರ್ ಹುಲಗಿಯಲ್ಲಿ ಹತ್ತಿದ್ದಾನೆ. ಬಳಿಕ, ಶ್ರೀಧರ್ ಗಂಗಾವತಿ ತಾಲೂಕಿನ ಹನುಮನಹಳ್ಳಿಗೆ ಹೋಗಬೇಕು ಅಂತ ಹೇಳಿದ್ದರಿಂದ ಆತನಿಗೆ ನಿರ್ವಾಹಕ ಹನುಮಪ್ಪ 30 ರೂಪಾಯಿ ಟಿಕೆಟ್ ನೀಡಿದ್ದಾರೆ. ಹುಲಗಿಯಿಂದ ಗಂಗಾವತಿಗೆ 26 ರೂಪಾಯಿ ಇತ್ತು, ಇದೀಗ 30 ರೂಪಾಯಿ ಟಿಕೆಟ್ ಯಾಕೆ ಅಂತ ಕೇಳಿ ಜಗಳ ಶುರುಮಾಡಿ ಹಲ್ಲೆ ಮಾಡಿದ್ದಾನೆ.
ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕ ಶ್ರೀಧರ್ “ಯಾರನ್ನು ಕೇಳಿ ಬಸ್ ದರ ಹೆಚ್ಚಿಸಿದ್ದೀರಿ” ಎಂದು ತಗಾದೆ ತೆಗೆದು ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ.
ಹನಮಪ್ಪನ ಬಲಗಣ್ಣು ಮತ್ತು ಹಣೆಗೆ ತೀರ್ವ ಪೆಟ್ಟು ಬಿದ್ದಿದೆ. ರಕ್ತಸ್ರಾವವಾಗಿದ್ದರಿಂದ ಕೂಡಲೇ ಹನುಮಪ್ಪನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಹನುಮಪ್ಪ ಆರೋಪಿ ಶ್ರೀಧರ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿಬ ತನಿಖೆ ಕೈಗೊಂಡಿದ್ದಾರೆ.




