Ad imageAd image

ಅಪರಿಚಿತ ಮಹಿಳೆಯ ಪೋನ್ ನಂಬರ್ ಕೇಳೋದು ಅಪರಾಧವಲ್ಲ : ಹೈಕೋರ್ಟ್ ತೀರ್ಪು

Bharath Vaibhav
ಅಪರಿಚಿತ ಮಹಿಳೆಯ ಪೋನ್ ನಂಬರ್ ಕೇಳೋದು ಅಪರಾಧವಲ್ಲ : ಹೈಕೋರ್ಟ್ ತೀರ್ಪು
LAW
WhatsApp Group Join Now
Telegram Group Join Now

ಅಹಮದಾಬಾದ್: ಅಪರಿಚಿತ ಮಹಿಳೆಯ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕೇಳುವುದು ಸೂಕ್ತವಲ್ಲ, ಕೇಳಿದರೆ ಅದು ಲೈಂಗಿಕ ಕಿರುಕುಳವಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.ಗುಜರಾತ್‌ನ ಮಹಿಳೆಯೊಬ್ಬರು ತನ್ನ ಹೆಸರನ್ನು ಕೇಳಿದ್ದ ವ್ಯಕ್ತಿಯ ವಿರುದ್ಧ ಐಪಿಸಿಯ ಸೆಕ್ಷನ್ 354 ಎ ಅಡಿ (ಲೈಂಗಿಕ ಕಿರುಕುಳ) ಎಫ್‌ಐಆರ್ ದಾಖಲಿಸಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಈ ತೀರ್ಪು ನೀಡಿದೆ.

ಮಹಿಳೆ ಎಫ್‌ಐಆರ್‌ ದಾಖಲಿಸಿದ ಬಳಿಕ ರಾಯ್ ಎಂಬ ವ್ಯಕ್ತಿ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ್ದ. ಪೊಲೀಸ್ ಅಧಿಕಾರಿಗಳು ತಮ್ಮ ಮೊಬೈಲ್ ತೆಗೆದುಕೊಂಡು ಕೆಲವು ಡೇಟಾವನ್ನು ಅಳಿಸಿದ್ದಾರೆ ಎಂದು ಆ ವ್ಯಕ್ತಿ ಪೊಲೀಸರ ವಿರುದ್ಧ ದೂರುಗಳನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದ.

ಪೊಲೀಸರು ಸಲ್ಲಿಸಿದ ಆರೋಪವನ್ನು ನಿರಾಕರಿಸಿದ ನ್ಯಾಯಮೂರ್ತಿ ನಿರ್ಜಾರ್ ದೇಸಾಯಿ, ಪೊಲೀಸ್ ಕ್ರಮವನ್ನು ಪ್ರಶ್ನಿಸಿದರು, ಯಾರಾದರೂ ನಿಮ್ಮ ಸಂಖ್ಯೆ ಕೇಳಿದರೆ ಎಫ್‌ಐಆರ್‌ಗೆ ಸೂಕ್ತ ಪ್ರಕರಣವಲ್ಲ. ಬೇರೆ ಯಾವುದಾದರೂ ಕೆಟ್ಟ ಉದ್ದೇಶ ಹೊಂದಿರುವುದನ್ನು ತೋರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಅಪರಿಚಿತ ಮಹಿಳೆಯ ನಂಬರ್‌, ಹೆಸರು, ವಿಳಾಸ ಕೇಳುವುದು ಔಚಿತ್ಯವಲ್ಲ, ಆದರೆ ನ್ಯಾಯಾಲಯದ ಪ್ರಕಾರ ಎಫ್‌ಐಆರ್‌ನಲ್ಲಿ ನಿರೂಪಿತವಾಗಿರುವ ಸಂಗತಿಗಳನ್ನು ಗಮನಿಸಿದರೆ ಅದು ಲೈಂಗಿಕ ಕಿರುಕುಳವಲ್ಲ ಎಂದು ಕೋರ್ಟ್‌ ಹೇಳಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!