ಸೇಡಂ: ತಾಲೂಕಿನ ಕೊಂಪಲ್ಲಿ ಅರಣ್ಯ ವಲಯದಲ್ಲಿ ಚಿರತೆ ದಾಳಿ ಮಾಡಿದ ಸ್ಥಳಕ್ಕೆ ಬಸವರಾಜ ಡಾಂಗೆ ಮಾನ್ಯ ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳು ಕಲಬುರಗಿ ರವರು ಬೇಟಿ ನೀಡಿ ಪರಿಶೀಲನೆ ಮಾಡಿ , ಸದರಿ ಸ್ಥಳದಲ್ಲಿ ಕಾಡು ಪ್ರಾಣಿಯ ಚಲನವಲನಗಳನ್ನು ತಿಳಿಯಲು 5 ಕ್ಯಾಮಾರ ಟ್ರ್ಯಾಪ್ ಅಳವಡಿಸಲು ಅಧೀನ ಸಿಬ್ಬಂದಿಗೆ ಸೂಚನೆ ನೀಡಿದರು.
ನಾಳೆ ಇನ್ನೊಂದು ಬೋನ್ (ಪಿಂಜರಾ) ಇರಿಸಲಾಗುವುದು ಎಂದು ತಿಳಿಸಿದರು ಹಾಗೂ
ಸುತ್ತ ಮುತ್ತಲಿನ ಜನರು ಯಾರೂ ಒಬ್ಬಂಟಿಯಾಗಿ ಹೊಲಗಳಿಗೆ ಹೋಗಬೇಡಿ.. ರಾತ್ರಿ ಸಮಯದಲ್ಲಿ ದನಕರುಗಳನ್ನು ಹೊಲ -ಗದ್ದೆಗಳಲ್ಲಿ ಕಟ್ಟಬೇಡಿ, ಎಂದು ಸಲಹೆ ನೀಡಿದರು.
ಸದರಿ ಸ್ಥಳದಲ್ಲಿ ಬಸವರಾಜ ಡಾಂಗೆ ಮಾನ್ಯ ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳು ಕಲಬುರಗಿ, ವಿಜಯಕುಮಾರ ವಲಯ ಅರಣ್ಯ ಅಧಿಕಾರಿಗಳು ಚಿತ್ತಾಪುರ, ಸಿದ್ಧುಗೌಡ ಉಪವಲಯ ಅರಣ್ಯಾಧಿಕಾರಿಗಳು, ಭೀಮನಗೌಡ ಗಸ್ತು ವನಪಾಲಕರು ಹಾಗೂ ಚಂದಾಪುರ ಮತ್ತು ಪಾಖಲಾ ಗ್ರಾಮದ ಗ್ರಾಮಸ್ಥರು ಸ್ಥಳದಲ್ಲಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




