ಬೆಂಗಳೂರು: ನಾಳೆ ರಾಜ್ಯಾದ್ಯಂತ ಬಾರ್ ಬಂದ್ ಇಲ್ಲ. ಬಂದ್ ನಿರ್ಧಾರವನ್ನು ಬಾರ್ ಅಸೋಸಿಯೇಷನ್ ವಾಪಾಸ್ ಪಡೆದುಕೊಂಡಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾರ್ ಮಾಲೀಕರ ಸಂಘ ನಾಳೆ ನ.20ರಂದು ರಾಜ್ಯಾದ್ಯಂತ ಬಾರ್ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿತ್ತು.
ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಾರ್ ಮಾಲೀಕರ ಸಂಘದ ಪದಾಧಿಕಾರಿಗಳ ಸಂಧಾನ ಸಭೆ ಯಶಸ್ವಿಯಾಗಿದ್ದು, ಬಾರ್ ಬಂದ್ ನಿರ್ಧಾರ ಹಿಂತೆಗೆದುಕೊಳ್ಳಲಾಗಿದೆ.
ಬಾರ್ ಅಸೋಸಿಯೇಷನ್ ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಮಾತುಕತೆ ಬಳಿಕ ನಾಳೆ ಮದ್ಯಮಾರಾಟ ಬಂದ್, ಬಾರ್ ಬಂದ್ ಇಲ್ಲ ಎಂದು ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ.