ಐನಾಪುರ: ಐನಾಪುರ ಪಟ್ಟಣದ ಶ್ರೀ ಕಾಳಿಕಾ ದೇವಿಯ ನವರಾತ್ರಿ ಹಬ್ಬದ ನಿಮಿತ್ಯ ದುರ್ಗಾಷ್ಟಮಿ ದಿನದಂದು ಲೋಕ ಕಲ್ಯಾಣರ್ಥವಾಗಿ ನವ ಕನ್ಯಾಕುಮಾರಿಯರ ಪೂಜೆಯನ್ನು ವೇದಮಾತಾ ಮಹಿಳಾ ಸಂಘ ಹಾಗೂ ಶ್ರೀ ಕಾಳಿಕಾ ದೇವಿ ವಿಶ್ವಕರ್ಮ ಸಮಾಜ ವಿಕಾಸ ಟ್ರಸ್ಟ ಎರ್ಪಡಿಸಿದ ಒಂಬತ್ತನೇಯ ದಿನದಂದು ಶ್ರೀ ಕಾಳಿಕಾ ದೇವಿ ದೇವಾಲಯದಲ್ಲಿ ಚಿಕ್ಕಮಕ್ಕಳು ಒಂಬತ್ತು ದೇವಿಯರ ವೇಷ ಭೂಷಣ ಧರಿಸಿದ ಚೈತನ್ಯ ದೇವಿಯರ ದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಅಜ್ಞಾನ ದಿಂದ ಸುಜ್ಞಾನ ಕಡೆಗೆ ಅಧರ್ಮದಿಂದ ಧರ್ಮದ ಕಡೆಗೆ ಸಾಗುವ ಸುದಿನವೇ ವಿಜಯದಶಮಿ ಸಂಕೇತವಾಗಿದು ಕಾಳಿಕಾದೇವಿಯ ದೇವಸ್ಥಾನಕ್ಕೆ ಪಟ್ಟಣದ ಭಕ್ತರು ಬಂದು ಸಂಪ್ರದಾಯಕ ಧಾರ್ಮಿಕ ಜ್ಯೋತಿ ದರ್ಶನ ಪಡೆಯುತ್ತಿರುವ ದೃಶ್ಯ ಕಣ್ಣಿಗೆ ಕಾಣಿಸುತ್ತಿತ್ತು. ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕಾಳಿಕಾದೇವಿಯ ಮಂದಿರ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಜಗಮಗ್ಗಿಸುತ್ತಿತು. ವೇದಮಾತಾ ಮಹಿಳಾ ಸಮಾಜ ಬಳಗದ ಸದಸ್ಯರಿಂದ ದಾಂಡಿಯಾ ನೃತ್ಯ ವೈವಿಧ್ಯ ಮನ ಸೆಳೆಯಿತು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರು ಧನ್ಯರಾದರು. ಸಂಜೆ ರಿಕಾರ್ಡ ಡಾನ್ಸ್, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಶ್ವಕರ್ಮ ವೇದಮಾತಾ ಮಹಿಳಾ ಸಮಾಜ ಬಳಗದ ಎಲ್ಲ ಸದಸ್ಯರು ಕುಲಭಾಂದವರು ಪಾಲ್ಗೋಂಡಿದರು.
ವರದಿ: ಮುರಗೇಶ




