ಸಾಮಾನ್ಯವಾಗಿ ಮಕ್ಕಳು ಹುಟ್ಟಿದಾಗಿನಿಂದ ತಾಯಿಯ ಮಡಿಲಲ್ಲಿ ಮಲಗೋದು ರೂಢಿ. ಅಮ್ಮನ ವಾಸನೆ, ಸ್ಪರ್ಶದಿಂದ ಅಮ್ಮನನ್ನ ಗುರುತಿಸಿ, ಅವರ ಆಸರೆ, ರಕ್ಷಣೆಯಲ್ಲಿ ಮಲಗುತ್ತಾರೆ. ಕೆಲವು ತಾಯಂದಿರು ತಮ್ಮ ಮಕ್ಕಳನ್ನ ತೊಟ್ಟಿಲಲ್ಲಿ ಅಥವಾ ಪಕ್ಕದಲ್ಲೇ ಮಲಗಿಸುತ್ತಾರೆ. ಸ್ವಲ್ಪ ದೊಡ್ಡವರಾದ ಮತ್ತು ತಿಳುವಳಿಕೆ ಬಂದ ಮಕ್ಕಳನ್ನ ಮಾತ್ರ ಒಬ್ಬರೇ ಮಲಗಿಸಬೇಕು.
ಆದ್ರೆ, ಯಾವ ವಯಸ್ಸಿನಿಂದ ಮಕ್ಕಳನ್ನ ಒಬ್ಬರೇ ಮಲಗಿಸಬೇಕು ಅನ್ನೋ ಅನುಮಾನ ಹಲವು ಪೋಷಕರಿಗೆ ಇರುತ್ತೆ. ಇನ್ನು ಕೆಲವು ಪೋಷಕರಿಗೆ ಮಕ್ಕಳನ್ನ ಒಬ್ಬರೇ ಮಲಗಿಸೋದ್ರ ಕಾರಣಾನೇ ತಿಳಿದಿರುವುದಿಲ್ಲ. ಹಾಗಾಗಿ ಮಕ್ಕಳನ್ನ ಯಾವ ವಯಸ್ಸಿನಿಂದ ಒಬ್ಬರೇ ಮಲಗಿಸಬೇಕು? ಅದಕ್ಕೆ ಕಾರಣಗಳೇನು ಅಂತ ಈ ಪೋಸ್ಟ್ ನಲ್ಲಿ ತಿಳ್ಕೊಳ್ಳೋಣ.
ಮಕ್ಕಳನ್ನ ಒಬ್ಬರೇ ಮಲಗಿಸೋದು ಯಾಕೆ ಮುಖ್ಯ?: ತಜ್ಞರ ಪ್ರಕಾರ, ಮಕ್ಕಳು ಮೊದಲಿಂದಲೂ ಪೋಷಕರ ಜೊತೆ ಮಲಗೋದನ್ನ ರೂಢಿಸಿಕೊಂಡಿರೋದ್ರಿಂದ ಒಬ್ಬರೇ ಮಲಗೋದು ಕಷ್ಟ ಅಂತ ಅನ್ನಿಸುತ್ತೆ ಮತ್ತು ಅವರಿಗೆ ಭಯನೂ ಇರುತ್ತೆ. ಆದ್ರೆ, ಮಕ್ಕಳನ್ನ ಒಬ್ಬರೇ ಮಲಗಿಸಿದಾಗ ಅವರು ಭಾವನಾತ್ಮಕವಾಗಿ ಬಲಿಷ್ಠರಾಗ್ತಾರೆ ಮತ್ತು ಅವರ ಮನಸ್ಸಿನಲ್ಲಿರೋ ಭಯವೂ ನಿವಾರಣೆಯಾಗುತ್ತೆ. ಇದರಿಂದ ಅವರು ಪೋಷಕರನ್ನ ಅವಲಂಬಿಸದೆ ಸ್ವತಂತ್ರವಾಗಿ ಬದುಕಲು ಕಲಿಯುತ್ತಾರೆ.
ಯಾವ ವಯಸ್ಸಿನಿಂದ ಮಕ್ಕಳನ್ನ ಒಬ್ಬರೇ ಮಲಗಿಸಬೇಕು?: ತಜ್ಞರ ಪ್ರಕಾರ, 7 ವರ್ಷದವರೆಗೆ ಪೋಷಕರು ತಮ್ಮ ಮಕ್ಕಳನ್ನ ತಮ್ಮ ಜೊತೆ ಮಲಗಿಸಬಹುದು ಅಂತ ಹೇಳ್ತಾರೆ. ಯಾಕಂದ್ರೆ ಈ ವಯಸ್ಸಿನವರೆಗೆ ಅವರು ಮಾನಸಿಕವಾಗಿ ಮಕ್ಕಳೇ ಆಗಿರುತ್ತಾರೆ. ನಂತರ ಅವರು ಬೆಳೆದ ಮೇಲೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಬೆಳೆಯಲು ಶುರುವಾಗುತ್ತೆ.
ಮಗುವಿಗೆ ಎಂಟು ವರ್ಷ ಆದ ಮೇಲೆ ಅವರನ್ನ ಒಬ್ಬರೇ ಮಲಗಿಸೋದು ತುಂಬಾ ಮುಖ್ಯ. ಒಂದು ವೇಳೆ ಈ ವಯಸ್ಸಿನ ನಂತರವೂ ನಿಮ್ಮ ಮಗು ನಿಮ್ಮ ಜೊತೆ ಮಲಗಬೇಕು ಅಂತ ಜಿದ್ದಿಸಿದ್ರೆ ಅವರಿಗೆ ಮೆಲ್ಲಗೆ ತಿಳಿ ಹೇಳಿ ಒಬ್ಬರೇ ಮಲಗಲು ರೂಢಿ ಮಾಡಿ. ಹೀಗೆ ಒಬ್ಬರೇ ಮಲಗಿಸೋದ್ರಿಂದ ಮಕ್ಕಳಿಗೆ ಮಾನಸಿಕ ಬೆಳವಣಿಗೆ ಮತ್ತು ಪಕ್ವತೆ ಸಿಗುತ್ತೆ.
ಮಕ್ಕಳನ್ನ ಒಬ್ಬರೇ ಮಲಗಿಸೋ ಮುನ್ನ ಇವುಗಳನ್ನ ನೆನಪಿಡಿ:
- ನಿಮ್ಮ ಮಗುವನ್ನ ನೀವು ಒಬ್ಬರೇ ಮಲಗಿಸೋಕೆ ಬಯಸಿದ್ರೆ ಅದನ್ನ ಹಂತ ಹಂತವಾಗಿ ರೂಢಿ ಮಾಡಿ. ಅಂದ್ರೆ ಮೊದಲು ನಿಮ್ಮ ಹಾಸಿಗೆ ಪಕ್ಕ ಅವರ ಹಾಸಿಗೆ ಹಾಕಿ ಮಲಗಿಸಿ. ನಂತರ ಒಬ್ಬರೇ ಮಲಗಿಸಿ.
- ಒಂದು ವೇಳೆ ನಿಮ್ಮ ಮಗು ಒಬ್ಬರೇ ಮಲಗೋಕೆ ಭಯಪಟ್ಟರೆ ಅವರನ್ನ ಒತ್ತಾಯಿಸಬೇಡಿ. ಬದಲಾಗಿ ವಾರಕ್ಕೆ ಎರಡು ದಿನ ಒಬ್ಬರೇ ಮಲಗಲು ರೂಢಿ ಮಾಡಿ. ಹೀಗೆ ಮಾಡ್ತಾ ಬಂದ್ರೆ ಮಕ್ಕಳು ಸ್ವತಃ ಒಬ್ಬರೇ ಮಲಗಲು ಶುರು ಮಾಡ್ತಾರೆ.
- ಅದೇ ರೀತಿ ನಿಮ್ಮ ಮಗು ಒಬ್ಬರೇ ಮಲಗೋಕೆ ಭಯಪಟ್ಟರೆ ನೀವು ಅವರು ನಿದ್ದೆ ಮಾಡುವವರೆಗೂ ಪಕ್ಕದಲ್ಲೇ ಇರಿ. ಹೀಗೆ ಮಾಡೋದ್ರಿಂದ, ಮಕ್ಕಳು ಸುಲಭವಾಗಿ ಒಬ್ಬರೇ ಮಲಗೋಕೆ ರೂಢಿ ಆಗ್ತಾರೆ.
- ಮಕ್ಕಳಿಗೆ ರಾತ್ರಿ ನಿದ್ದೆ ಮಾಡುವವರೆಗೂ ಕಥೆ ಹೇಳಬಹುದು. ಹೀಗೆ ಮಾಡೋದ್ರಿಂದಲೂ ಮಕ್ಕಳು ಬೇಗ ಒಬ್ಬರೇ ಮಲಗೋಕೆ ರೂಢಿ ಆಗ್ತಾರೆ.
- ಮುಖ್ಯವಾಗಿ ಮಕ್ಕಳು ಮಲಗೋಕೆ ಹೋಗೋ ಮುನ್ನ ಖಂಡಿತ ಬಾಯಿ ತೊಳೆಯಬೇಕು ಅಂತ ಹೇಳಿ. ಇದು ಅವರ ಉತ್ತಮ ನಿದ್ದೆ ಮತ್ತು ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತೆ.
ಗಮನಿಸಿ : ಕೆಲವು ಮಕ್ಕಳು ಒಬ್ಬರೇ ಮಲಗೋಕೆ ಬಯಸಿದ್ರೂ ಪೋಷಕರು ಒಪ್ಪುವುದಿಲ್ಲ. ಆದ್ರೆ ಅದು ತಪ್ಪು. ಪೋಷಕರು ಹೀಗೆ ಮಾಡೋದ್ರಿಂದ ಮಕ್ಕಳು ಜೀವನಪೂರ್ತಿ ಏನನ್ನೂ ಸ್ವತಂತ್ರವಾಗಿ ಮಾಡೋಕೆ ಆಗಲ್ಲ. ಹಾಗಾಗಿ ಈ ವಿಷಯದಲ್ಲಿ ಪೋಷಕರು ಸ್ವಲ್ಪ ಜಾಗರೂಕರಾಗಿರಿ