ರಾಮದುರ್ಗ :-ತಾಲೂಕಿನಲ್ಲಿ ಶ್ರೀ ಪ್ರತುಲ ಸಕ್ಸೆನಾ ಪ್ರೋಜೆಕ್ಟ ಡೈರೆಕ್ಟರ ಹಾಗೂ NPMU, ಮತ್ತು ಶ್ರೀ ಮದುಮಂತಿ ರಾಯ್ ಡೆಪುಟಿ ಡೈರೇಕಟರ್ NPMU, ಅಟಲ್ ಭೂಜಲ ಯೋಜನೆ ಕೇಂದ್ರ ತಂಡವು ಇಂದು ಮುಳ್ಳೂರ ಹಾಗೂ ಮುದಕವಿ ಗ್ರಾಪಂಗೆ ಭೇಟಿ ನೀಡಿ ಆ ಗ್ರಾಪಂ ವ್ಯಾಪ್ತಿಯಡಿ ಕೈಗೊಂಡಿರುವ ಚಕ್ ಡ್ಯಾಂ ಹಾಗೂ ವಿವಿದ ಇಲಾಖೆಯಡಿ ಕೈಗೊಂಡಿರುವ ಕಾಮಗಾರಿಗಳಾದ ಕೃಷಿ ಹೊಂಡ ,ಬದುನಿರ್ಮಾಣ, ಕಾಮಗಾರಿಗಳನ್ನು ವಿಕ್ಷಸಿ,ಈ ಕಾಮಗಾರಿಗಳಿಂದ ಯಾವರೀತಿ ಅನಕೂಲತೆಗಳು ಆಗಿದೆ ಎಂದು ಗ್ರಾಮದ ರೈತ ರೊಂದಿಗೆ ಚರ್ಚಿಸಿದರು. ಗ್ರಾಮದ ರೈತರಿಂದ ಮಾಹಿತಿ ಪಡೆದುಕೊಂಡ ತಂಡವು ಅಟಲ್ ಭೂಜಲ ಯೋಜನೆ,ಹಾಗೂ ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ,ಕೃಷಿ ಇಲಾಖೆಯಿಂದ ಕೈ ಗೊಂಡ ಕಾಮಗಾರಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು,
ಅದರಂತೆ ತುಂತುರು ಹನಿನೀರು ಸ್ಪಿಂಕ್ಲರ್ ಪಡೆದುಕೊಂಡ ಗ್ರಾಮದ ರೈತರೊಂದಿಗೆ ಅನಕೂಲತೆಗಳ ಬಗ್ಗೆ ಚರ್ಚಿಸಿದರು,ಅದರಂತೆ ಗ್ರಾಮ ರೈತರು ಅಟಲ್ ಬೋಜಲ ಯೋಜನೆಯುಡಿ ಈ ಭಾಗದಲ್ಲಿ ಹೇಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಹೇಚ್ಚಸುವಂತ ಕಾಮಗಾರಿಗಳಾದ ಚಕ್ ಡ್ಯಾಂ ಗಳನ್ನು ಕಟ್ಟಿಸುವ ಕೇಲಸವಾಗಬೇಕು ಎಂದು ಅದರಂತೆ ಗ್ರಾಮದಲ್ಲಿ ಹೈನುಗಾರಿಕೆ ಉತ್ತೆಜಿಸುವಂತ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ಕೋಡುವ ಅನುದಾನವನ್ನು ಹೇಚ್ಚಸ ಬೇಕು ಎಂದು ಗ್ರಾಮಸ್ಥರು ಅದಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಮಾನ್ಯ ಶಿವಕುಮಾರ್ ರಾಜಾಪೂರ ನೋಡಲ್ ಅದಿಕಾರಿಗಳು ಜಿಲ್ಲಾ ಅಟಲ್ ಭೂಜಲ ಯೂಜನೆ (DPMU)ಬೆಳಗಾವಿ ,ಹಾಗೂ ಶ್ರೀ ಅಕ್ಷಯ ಪಾಟೀಲ WRE ಬೆಳಗಾವಿ ಶಪಿ ಬೆಳವಟಗಿ ಕೃಷಿ ಅಧಿಕಾರಿ ರಾಮದುರ್ಗ,ಹಾಗೂ ಸಂಗನಗೌಡ ಹಂದ್ರಾಳ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ ಉ) ತಾಲೂಕ ಪಂಚಾಯತ ರಾಮದುರ್ಗ ಹಾಗೂ ತಾಪಂ ಕಲ್ಮೇಶ ಹಗೇದ ಆಇಸಿ ಸಂಯೋಜಕರು. ಹಾಗೂ ಮಹೇಶ ತಳವಾರ ತಾಂತ್ರೀಕ ಸಂಯೋಜಕ ಹಾಗೂ ಮಾಲತೇಶ ದಾಸಪನವರ ಗ್ರಾಪಂ ಪಿಡಿಓ ಮುಳ್ಳರ,ಹಾಗೂ ವಿಜಯ ಕುಮಾರ ವನಿಕ್ಯಾಳ ಪಿಡಿಓ ಗ್ರಾಪಂ ಮುದಕವಿ ಹಾಗೂ ಗ್ರಾಮ ಪಂಚಾಯತಿ ಅದ್ಯಕ್ಷರು ಹಾಗೂ ಸದಸ್ಯರು, ಹಾಗೂ ದಿಲಾವರಸಾಬ ನದಾಪ , ತಾಲೂಕ ಅಟಲ್ ಭೂಜಲ ಯೋಜನೆ ಸಂಯೋಜಕರು ಹಾಗೂ ಗ್ರಾಮ ಸ್ಥರು, ಗ್ರಾಮದ ರೈತರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.
ವರದಿ:-ಮಂಜುನಾಥ ಕಲಾದಗಿ