ಮೊಳಕಾಲ್ಮೂರು :- ಭಾರತೀಯ ಜನತಾ ಪಾರ್ಟಿ,ಮೊಳಕಾಲ್ಮುರು ವತಿಯಿಂದ
ಬುಧುವಾರ ಮೊಳಕಾಲ್ಮುರು ಮಂಡಲ ಕಾರ್ಯಾಲಯದಲ್ಲಿ ದೇಶದ ಹೆಮ್ಮೆಯ ಮಾಜಿ ಪ್ರಧಾನಿಗಳು,ಅಜಾತಶತ್ರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಮೊಳಕಾಲ್ಮುರು ಮಂಡಲ ಅಧ್ಯಕ್ಷರಾದ ಡಾ ಮಂಜುನಾಥ ಪಿ ಎಂ ರವರು.,
ನಾವು ಈ ದಿವ್ಯ ಕ್ಷಣದಲ್ಲಿ ಭಾರತ ದೇಶವನ್ನು ಶಕ್ತಿಸಂಪನ್ನ ಮಾಡಲು ತನ್ನ ಬದುಕನ್ನೇ ಅರ್ಪಿಸಿದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ”
1924 ರಲ್ಲಿ ಜನಿಸಿದ ಅವರು 1940 ರಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದವರು,ನಂತರ RSS ನ ಸಂಪರ್ಕಕ್ಕೆ ಬಂದು 1951 ಜನಸಂಘದಲ್ಲಿ ಸೇರ್ಪಡೆಯಾದರು,1977 ರಲ್ಲಿ 2 ವರ್ಷಗಳ ಕಾಲ ಜನತಾ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು.1980 ರಲ್ಲಿ ಭಾ ಜ ಪ ಸ್ಥಾಪಕರಲ್ಲಿ ಒಬ್ಬರಾಗಿ ಪಕ್ಷವನ್ನು ಬಲಪಡಿಸಿದರು.
1998 ರಲ್ಲಿ ದೇಶದಲ್ಲಿ 23 ಪಕ್ಷಗಳ ಸಮನ್ವಯತೆಯಿಂದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಅವರು ಸುವರ್ಣ ಚತುಷ್ಪಥ ರಸ್ತೆ, ಗ್ರಾಮ ಸಡಕ್ ಯೋಜನೆ,ಸರ್ವ ಶಿಕ್ಷಣ ಅಭಿಯಾನ ದಂತಹ ಬೃಹತ್ ಯೋಜನೆಗಳನ್ನು ಜಾರಿಗೆ ತಂದ ಅವರು ಕಾರ್ಗಿಲ್ ಯುದ್ಧ,ಪೋಖ್ರಾನ್ ಅಣು ಪರೀಕ್ಷೆಗಳನ್ನು ನೆಡೆಸಿ ಭಾರತದ ಶಕ್ತಿಯನ್ನು ವಿಶ್ವದೆದುರು ತೋರಿಸಿದ್ದರು ಎಂದರು.
ವಾಜಪೇಯಿ ಯವರದು ಕವಿ ಹೃದಯ ಮತ್ತು ಅಜಾತ ಶತ್ರು ಎಂದೇ ರಾಜಕಾರಣದಲ್ಲಿ ಕರೆಸಿಕೊಂಡವರು ಇಂತಹ ಮೇರು ವ್ಯಕ್ತಿತ್ವದ ರಾಜಕಾರಣಿ ನಮಗೆಲ್ಲಾ ಆದರ್ಶ ಅವರ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಾಗೋಣ ಎಂದರು.
ಕಾರ್ಯಕ್ರಮದಲ್ಲಿ ಪ.ಪಂ ಮಾಜಿ ಅಧ್ಯಕ್ಷರಾದ ಟಿ ರವಿಕುಮಾರ್, ಸದಸ್ಯರಾದ ಮಂಜಣ್ಣ, ಕಾರ್ಯದರ್ಶಿ ಪ್ರಭಾಕರ,ಎಸ್ಸಿಮೋರ್ಚಾ ಅಧ್ಯಕ್ಷ ಸಿದ್ದಾರ್ಥ ಮುಖಂಡರಾದ ಸಿದ್ದಣ್ಣ, ಪೃಧ್ವಿರಾಜು,ಅರ್ಜುನ ಜಿಂದೆ,ರಾಮಾಂಜಿನೇಯ,ಭೀಮಣ್ಣ ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ