ಹಾರೂಗೇರಿ : ಆನೆ ತುಳಿತಕ್ಕೆ ಸಾವನಪ್ಪಿದ್ದ ಮಾವುತನ ಸಹಾಯಕ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದ ಧೃವ ಎಂಬ ಆನೆಯಿಂದ ಮಾವುತನ ಸಹಾಯಕ ಸಾವು ಅಲಖನೂರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಅಥಣಿ ತಾಲೂಕಿನ ಭರಮಕೋಡ ಕರೆಪ್ಪ ಭೇವನೂರ (30) ಮೃತ ದುರ್ದೈವಿ. ಸೋಮವಾರ ಬೆಳಿಗ್ಗೆ ಆನೆಗೆ ಮಧ ಬಂದ ಹಿನ್ನಲೆ ಆನೆಗೆ ಮೇವು ಹಾಕಲು ಹೋದಾಗ ಆನೆ ಮಾವುತನ ಸಹಾಯಕನ ಮೇಲೆ ದಾಳಿ 21 ವರ್ಷದ ಗಂಡಾನೆ ಧೃವ ಎಂಬ ಆನೆಯಿಂದ ಘಟನೆ ನಡೆದಿದೆ.
ಮೃತ ಕರೆಪ್ಪ ಭೇವನೂರಗೆ 10 ದಿನಗಳ ಹಿಂದೆ ಅಷ್ಟೇ ಗಂಡು ಮಗು ಜನಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಾರೂಗೇರಿ ಪೋಲಿಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಈ ಕುರಿತು ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.