Ad imageAd image

ಗ್ಯಾಸ್‌ ಕಟರ್‌ ಬಳಸಿ ಎಟಿಎಂ ದರೋಡೆಗೈದ ಖದೀಮರು 

Bharath Vaibhav
ಗ್ಯಾಸ್‌ ಕಟರ್‌ ಬಳಸಿ ಎಟಿಎಂ ದರೋಡೆಗೈದ ಖದೀಮರು 
WhatsApp Group Join Now
Telegram Group Join Now

ಬೆಳಗಾವಿ: ಎಟಿಎಂ ನುಗ್ಗಿದ ಕಳ್ಳರು ಗ್ಯಾಸ್‌ ಕಟರ್‌ ಸಹಾಯದಿಂದ ಎಟಿಎಂ ಯಂತ್ರವನ್ನು ಮುರಿದು 75,600 ರೂ. ಹಣವನ್ನು ದೋಚಿರುವಂತಹ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.

ಸಾಂಬ್ರಾ ಗ್ರಾಮದ ಮುಖ್ಯರಸ್ತೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಈ ಘಟನೆ ಸದಾ ವಾಹನ ದಟ್ಟಣೆ ಇದ್ದರೂ ಈ ಪ್ರದೇಶದಲ್ಲಿ ಎಟಿಎಂ ದರೋಡೆ ನಡೆದಿರುವುದು ಅಚ್ಚರಿ ಮೂಡಿಸಿದೆ. ದುಷ್ಕರ್ಮಿಗಳು ಎಟಿಎಂ ಕೇಂದ್ರಕ್ಕೆ ನುಗ್ಗಿದ ಏಳೇ ನಿಮಿಷದಲ್ಲಿ ಹಣ ದೋಚಿಕೊಂಡು ಹೋಗಿದ್ದಾರೆ.

ವರದಿಗಳ ಪ್ರಕಾರ ಮೂವರು ಮುಸುಕುಧಾರಿಗಳು ಎಟಿಎಂಗೆ ನುಗ್ಗಿದ್ದು, ಮೊದಲಿಗೆ ಬಣ್ಣದ ಸ್ಪ್ರೇ ಬಳಸಿ ಕ್ಯಾಮೆರಾವನ್ನು ಬಂದ್‌ ಮಾಡಿದ್ದಾರೆ. ಇದು ಬ್ಯಾಂಕ್‌ ಕಂಟ್ರೋಲ್‌ ರೂಂಗೆ ಮಾಹಿತಿ ರವಾನೆಯಾಗಿದೆ.

ತಕ್ಷಣ ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಆದರೆ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಘಟನೆ ನಡೆದಿದೆ. ಆರೋಪಿಗಳನ್ನು ಪತ್ತೆ ಮಾಡಲು ಮೂರು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!