ಬೆಳಗಾವಿ: ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಹೆಚ್.ಡಿ.ಎಫ್.ಸಿ. ಬ್ಯಾಂಕಿನ ಎ.ಟಿ.ಎಮ್‌ನಲ್ಲಿ ಸಂಭವಿಸಿದ 8,65,500 ರೂ. ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. “ಎಸ್.ಐ.ಎಸ್ ಪ್ರೋಸಿಗರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್” ಕಂಪನಿಯ ಉದ್ಯೋಗಿಯಾದ ಕ್ರಿಷ್ಣಾ ಸುರೇಶ ದೇಸಾಯಿ (23), ಜ್ಯೋತಿ ನಗರ, ಕಂಗ್ರಾಳಿ ಕೆ.ಎಚ್., ಬೆಳಗಾವಿ, ಎ.ಟಿ.ಎಮ್.ದ ಕಾಂಬಿನೇಶನ್ ಪಾಸ್‌ವರ್ಡ್ ಬಳಸಿ ಹಣವನ್ನು ಕದ್ದುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.
ತಪಾಸಣೆ ಮತ್ತು ವಶಕ್ಕೆ ಪಡೆದ ಮಾಲು:
ಮಾನ್ಯ ಪೊಲೀಸ್ ಆಯುಕ್ತರು ಮತ್ತು ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಮಾರ್ಕೇಟ್ ಪೊಲೀಸ್ ಠಾಣೆ ಪಿಐ ಮಹಾಂತೇಶ ಧಾಮಣ್ಣವರ ನೇತೃತ್ವದ ತಂಡವು ಶೀಘ್ರ ಕಾರ್ಯಾಚರಣೆ ನಡೆಸಿ ಕಳ್ಳತನಕ್ಕೆ ಬಳಸಿದ ಹಣ ಹಾಗೂ ಬಂಗಾರದ ಆಭರಣವನ್ನು ವಶಪಡಿಸಿಕೊಂಡಿದೆ:
1.ಹಣ: ₹5,74,000
2.ಬಂಗಾರದ ಆಭರಣ: 20 ಗ್ರಾಂ, ಮೌಲ್ಯ ₹1,56,000
ಒಟ್ಟು ₹7.30 ಲಕ್ಷದ ಹಣ ಮತ್ತು ಆಭರಣವನ್ನು ಜಪ್ತ ಮಾಡಲಾಗಿದೆ.
ತಪಾಸಣಾ ತಂಡದ ಕಾರ್ಯಕ್ಷಮತೆ:
ಮಹಾಂತೇಶ ಮಠಪತಿ (ಪಿಎಸ್‌ಐ), ವಿಠಲ ಹಾವನ್ನವರ (ಪಿಎಸ್‌ಐ), ಹೆಚ್.ಎಲ್.ಕೆರೂರ (ಪಿಎಸ್‌ಐ) ಸೇರಿದಂತೆ ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಕಡೋಲ್ಕರ, ಶಂಕರ ಕುಗಟೊಳ್ಳಿ, ಐ.ಎಸ್.ಪಾಟೀಲ್, ನವೀನಕುಮಾರ, ಶಿವಪ್ಪ ತೇಲಿ, ರಮೇಶ ಅಕ್ಕಿ ಮತ್ತು ಸಿಪಿಸಿಗಳಾದ ಸುರೇಶ ಕಾಂಬಳೆ, ಕಾರ್ತಿಕ, ಎಮ್.ಬಿ.ವಡೆಯರ್, ಮಹಾದೇವ ಕಾಶೀದ, ಸಂಜು ಸಂಗೋಟಿ ಇವರುಗಳ ಶ್ರಮದಿಂದ ಕೇಸು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ.
ಪೊಲೀಸ್ ಇಲಾಖೆಯ ಮೆಚ್ಚುಗೆ:
ಮಾನ್ಯ ಪೊಲೀಸ್ ಆಯುಕ್ತರು ಮತ್ತು ಉಪ ಆಯುಕ್ತರು ಮಾರ್ಕೇಟ್ ಪೊಲೀಸ್ ಠಾಣೆಯ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದ್ದು, ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುತ್ತಿದೆ.