ನಕಲಿ ವೈದ್ಯರ ವಿರುದ್ಧ ಸಾರ್ವಜನಿಕರು ದೂರು ಹಿನ್ನಲೆ
ನಕಲಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಲು ರಾಯಚೂರು ಜಿಲ್ಲಾಧಿಕಾರಿ ಆದೇಶ

ರಾಯಚೂರು: ಜಿಲ್ಲಾಧಿಕಾರಿ ನಿತೀಶ್. ಕೆ. ಆದೇಶದಂತೆ ಇಂದು ಅಧಿಕಾರಿಗಳ ತಂಡ ದಾಳಿ
ರಾಯಚೂರು ಎಸಿ ಗಜಾನ ಬಾಳೆ ಹಾಗೂ ರಾಯಚೂರು ಡಿಎಚ್ ಒ ನೇತೃತ್ವದಲ್ಲಿ ದಾಳಿ
ರಾಯಚೂರು ನಗರದ 10ಕ್ಕೂ ಹೆಚ್ಚು ನಕಲಿ ಆಸ್ಪತ್ರೆಗಳ ಮೇಲೆ ದಾಳಿ
ದಾಳಿ ಮಾಡಿ ನಕಲಿ ಆಸ್ಪತ್ರೆ ಮತ್ತು ಕ್ಲಿನಿಕ್ ಸೀಜ್ ಮಾಡಿದ ಅಧಿಕಾರಿಗಳು
ದಾಳಿ ಬಳಿಕ ಬಗ್ಗೆ ರಾಯಚೂರು ಡಿಎಚ್ ಒ ಡಾ. ಸುರೇಂದ್ರ ಬಾಬು ಹೇಳಿಕೆ
ನಕಲಿ ವೈದ್ಯರು ಹಾಗೂ ನಕಲಿ ಆಸ್ಪತ್ರೆ ಬಗ್ಗೆ ದೂರುಗಳು ಬಂದಿವೆ.
ಅಂತವರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
10 ಕಡೆಗಳಲ್ಲಿ ದಾಳಿ ಮಾಡಿದ್ದೇವೆ ಕೆಪಿಎಂಇ ( ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ) ಕಾಯ್ದೆ ಅಡಿ ನೋಂದಣಿ ಆಗದ ಆಸ್ಪತ್ರೆ ಸೀಜ್ ಮಾಡಿದ್ದೇವೆ.
ಸಾರ್ವಜನಿಕರು ಸಹ ನಕಲಿ ವೈದ್ಯರ ಬಳಿಗೆ ಹೋಗಬಾರದು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರನ್ನ ನಿಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ವರದಿ: ಗಾರಲ ದಿನ್ನಿ ವೀರನ ಗೌಡ




