ಐಗಳಿ: ಗ್ರಾಮದ ಹೊರ ವಲಯದಲ್ಲಿ ಇಂದು ಮುಂಜಾನೆ ಗ್ರಾಮದ ರಸೀದ ಲವಂಗಿ ಅವರ ಮಗನಾದ ಕು. ಹರಿಶೇದ್ ಲವಂಗಿ ೩ ವರ್ಷದ ಬಾಲಕನಿಗೆ ಆಟ ಆಡುವ ಸಂದರ್ಭದಲ್ಲಿ ಸ್ಥೀಳಿಯ ನಾಯಿ ದಾಳಿ ಮಾಡಿ ಕಚ್ಚಿದ ಘಟನೆ ನಡದಿದೆ. ಮೂರು ವರ್ಷದ ಮಗುವಿಗೆ ಕಿವಿಗೆ ಕಾಲಿಗೆ ಬೆನ್ಬಿಗೆ ಬಾರಿ ಗಾಯವಾಗಿದ್ದು ಮಹಾರಾಷ್ಟ್ರದ ಮಿರಜ ಖಾಸಗಿ ಆಸ್ಪತ್ರೆಗೆ ದಾಖಲಾಸಿದ್ದಾರೆ. ತಂದೆ ತಾಯಿ ಬಡತನದಲ್ಲಿ ಇದ್ದು ದಿನ ನಿತ್ಯ ಕೂಲಿ ಮಾಡಿ ಜೀವನ ಸಾಗುಸುವ ಕುಟುಂಬಕ್ಕೆ ನಾಯಿ ಕಚ್ಚಿ ಬಾಲಕ ಅಸ್ಥವ್ಯಸ್ತವಾಗಿ ಕುಟುಂಬಕ್ಕೆ ದಿಕ್ಕೂ ದೊಚದಂತಾಗಿದೆ ಸಾಕಿದನ ನಾಯಿ ಕಚ್ಚಿದರೆ ಅದಕ್ಕೆ ಆ ನಾಯಿಯ ಮಾಲಕರು ಹೊಣೆಯಾಗತ್ತಾರೆ.
ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದ್ದು ದಿನ ನಿತ್ಯ ರಸ್ತೆಯಲ್ಲಿ ನೂರಾರು ಶಾಲೆಯ ಮಕ್ಕಳು ಓಡಾಟ ಮಾಡತ್ತವೆ ಇತಂಹ ಘಟನೆ ಸಂಭವಿಸಿದಾಗ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಮಕ್ಕಳ ಶಿಕ್ಷಣ ಮೇಲೆ ಪರಿಣಾಮವು ಬೀರಬಹುದು ನಾಯಿ ಸಾಕುವವರು ಅವುಗಳ ಮೇಲೆ ನಿಗಾ ಇಡಬೇಕಾಗುತ್ತದೆ ಈ ಘಟನೆ ಸಿಸಿ ಟಿವಿ ಕ್ಯಾಮರಾ ಸೇರೆಯಾಗಿದೆ. ಗ್ರಾಮದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು ಗ್ರಾಮ ಪಂಚಾಯತಿ ಅಧಿಕಾರಿಗಳು ಇನ್ನೂ ಮುಂದೆ ಇತಂಹ ಘಟನೆಗಳು ಸಂಬವಿಸಂದತೆ ಕ್ರಮ ಕೈಗೊಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ .
ವರದಿ: ಆಕಾಶ ಎಮ್




