ಲಕ್ನೋ: ಆಸ್ಟ್ರೇಲಿಯಾ ಎ ಕ್ರಿಕೆಟ್ ತಂಡವು ಭಾರತ ಎ ವಿರುದ್ಧ ಇಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ತನ್ನ ಹಿಡಿತವನ್ನು ಮುಂದುವರೆಸಿದೆ.
ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂರನೇ ದಿನದ ಮೊದಲ ಅವಧಿಯ ಆಟದಲ್ಲಿ ಆಸ್ಟ್ರೇಲಿಯಾ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 127 ರನ್ ಗಳಿಸಿದ್ದು, ಪಂದ್ಯದಲ್ಲಿ ಒಟ್ಟಾರೆ 353 ರನ್ ಗಳ ಮುನ್ನಡೆ ಪಡೆದಿದೆ.
ನ್ಯಾಥನ್ ಮ್ಯಾಕ್ಸವೇನಿ 58 ಹಾಗೂ ಜಾಕ್ ಎಡ್ವಡ್ಸ್ 7 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಮೊದಲ ಇನ್ನಿಂಗ್ಸ್ ಗೆ ಹೋಲಿಸಿದರೆ ದ್ವಿತೀಯ ಸರದಿಯಲ್ಲಿ ಸುಧಾರಿತ ಪ್ರದರ್ಶನ ತೋರಿದ ಭಾರತ ಎ, ತಂಡದ ಬೌಲರುಗಳು ಪ್ರವಾಸಿ ತಂಡಕ್ಕೆ ಕಡಿವಾಣ ಹಾಕಿದರು. ಆದರೆ ಪ್ರವಾಸಿ ತಂಡ ಮೊದಲ ಸರದಿಯಲ್ಲಿ ಗಳಿಸಿದ ಮುನ್ನಡೆ ಅವರಿಗೆ ಮುನ್ನಡೆ ಗಳಿಸಿಕೊಟ್ಟಿತು.




