Ad imageAd image
- Advertisement -  - Advertisement -  - Advertisement - 

ಸಮಾಜ ಕಲ್ಯಾಣ ಅಧಿಕಾರಿಗೆ ಅವಾಜ್

Bharath Vaibhav
ಸಮಾಜ ಕಲ್ಯಾಣ ಅಧಿಕಾರಿಗೆ ಅವಾಜ್
WhatsApp Group Join Now
Telegram Group Join Now

ಯಳಂದೂರು:- ಸಮಾಜ ಕಲ್ಯಾಣ ಅಧಿಕಾರಿಗೆ ಅವಾಜ್ ಹಾಕಿರುವ ಹೊರಗುತ್ತಿಗೆ ನೌಕರ ಗುರುಸ್ವಾಮಿ ಯನ್ನು ಸೇವೆಯಿಂದ ವಜಾ ಗೊಳಿಸುವಂತೆ ಡಿ. ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಆಗ್ರಹ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಕೆಲಸ ಮಾಡುವತ್ತಿರುವ ಹೊರಗುತ್ತಿಗೆ ನೌಕರ ಗುರುಸ್ವಾಮಿ ಎಂಬುವವರು ಸಮಾಜ ಕಲ್ಯಾಣ ಅಧಿಕಾರಿ ರಾಜೇಶ್ ರವರನ್ನು ಏರು ಧ್ವನಿಯಲ್ಲಿ ನನ್ನನ್ನು ಕೆಲಸ ದಿಂದ ತೆಗೆದಿದ್ದೀಯ ನಿನ್ನನ್ನು ಆಯ್ಕೊಂಡು ತಿನ್ನೋ ಆಗೇ ಮಾಡ್ತೀನಿ ಎಂದು ಅವಾಜ್ ಹಾಕಿದ ಘಟನೆ ನಡೆದಿದೆ…

ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರ ಸಂಪನ್ಮೂಲ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ನೌಕರ ಗುರುಸ್ವಾಮಿ ಎಂಬುವವರು ಕಚೇರಿಯ ಕಡತಗಳ ಹಾಗೂ ಕೆಲವು ಮಾಹಿತಿಗಳನ್ನು ಕೆಲವು ಸಂಘಟನೆಯ ಮುಖಂಡರಿಗೆ ನೀಡುತ್ತಿದ್ದೂ ಬೆಳಕಿಗೆ ಬಂದಿತ್ತು, ಈ ವ್ಯಕ್ತಿಯ ಬಗ್ಗೆ ಕೆಲವು ಸಂಘಟನೆಯ ಮುಖಂಡರು ದೂರು ನಿದ್ದಿದ್ದು, ಸರ್ಕಾರ ಇವರನ್ನು ಕೆಲಸ ದಿಂದ ತೆಗೆದುಹಾಕಿತ್ತು, ಆದರೆ ಸರ್ಕಾರದ ಆದೇಶಕ್ಕೂ ಬೆಲೆ ಕೊಡದೆ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದನು, ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ರಾಜೇಶ್ ರವರು ನಿನ್ನನ್ನು ಕೆಲಸದಿಂದ ತೆಗೆದು ಹಾಕಿದೆ ಹೊರಗೆ ಹೋಗಿ ಎಂದಾಗ ಒಬ್ಬ ಕಾರ್ಯನಿರ್ವಹಿಸುತ್ತಿದ್ದ ಪರಿಶಿಷ್ಟ ಜಾತಿಯ ಅಂಗವಿಕಲ ಅಧಿಕಾರಿಯನ್ನು ಕಚೇರಿಯ ಸಮಯದಲ್ಲಿ ನನ್ನನ್ನು ಕೆಲಸದಿಂದ ತೆಗೆಸಿದ್ದೀಯ ನಿನ್ನನ್ನು ಆಯ್ಕೊಂಡು ತಿನ್ನೋಹಾಗೆ ಮಾಡ್ತೀನಿ ಎಂದು ಅವಾಜ್ ಹಾಕಿದ್ದಾನೆ ಎಂದು ಅಧಿಕಾರಿ ರಾಜೇಶ್ ರವರು ತಿಳಿಸಿದ್ದಾರೆ

ಇಂದು ಹೊರ ಗುತ್ತಿಗೆ ನೌಕರ ಗುರು ಪರವಾಗಿ ಕೆಲವು ಸಂಘಟನೆಯ ಮುಖಂಡರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಇವರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಬೇಡಿಕೆ ಇಟ್ಟಿತ್ತಿದ್ದಾರೆ, ಪ್ರತಿಭಟನೆ ಸ್ಥಳಕ್ಕೆ ಬೇರೆ ಸಂಘಟನೆಯ ಮುಖಂಡರು ಬಂದು ನಾವು ಪ್ರತಿಭಟನೆ ಮಾಡುತ್ತೇವೆ ಒಬ್ಬ ಸರ್ಕಾರಿ ಆಡಳಿತ ಅಧಿಕಾರಿಯನ್ನು ಈ ರೀತಿ ಅವಾಜ್ ಹಾಕಿ ಕಚೇರಿಯ ಮಾಹಿತಿ ಗಳನ್ನು ಹೊರಗಡೆ ತಿಳಿಸುತ್ತಿರುವ ಹೊರಗುತ್ತಿಗೆ ನೌಕರ ಗುರುಸ್ವಾಮಿ ಯನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ತಿಳಿಸಿದರು.

ಈ ಬಗ್ಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಯರಿಯೂರು ರಾಜಣ್ಣ ಮಾತನಾಡಿ ಯಳಂದೂರು ತಾಲೂಕು ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಆಪರೇಟರ್ ಗುರುಸ್ವಾಮಿ ಎಂಬುವವರ ಮೇಲೆ ಬೆಂಗಳೂರು ಆಯುಕ್ತರ ಬಳಿ ದೂರು ಹೋಗಿದ್ದು ಈತನ ಮೇಲೆ ಕ್ರಮವಹಿಸಿ ಎಂದು ಆದೇಶ ಮಾಡಿರುತ್ತಾರೆ, ಆ ನಿರ್ದೇಶನ ದಂತೆ ಉಪ ನಿರ್ದೇಶಕರು ಯಳಂದೂರು ಕಚೇರಿಗೆ ಮಾಹಿತಿ ನೀಡಿರುತ್ತಾರೆ, ಹಾಗಾಗಿ ಇತನನ್ನು ಇವರ ಕಾಂತಿ ಏಜೆನ್ಸಿ ರವರು ಕೂಡ ಇವರನ್ನು ಕೆಲಸದಿಂದ ವಜಗೊಳಿಸಿ ಎಂದು ಪತ್ರ ನೀಡಿರುತ್ತಾರೆ

ತದನಂತರ ಗುರುಸ್ವಾಮಿ ಎಂಬವರು ಕೆಲವು ಸಂಘಟನೆಯ ಮುಖಂಡರುಗಳನ್ನು ಬಳಸಿಕೊಂಡು ಸಮಾಜ ಕಲ್ಯಾಣ ಅಧಿಕಾರಿಯನ್ನು ಧಮ್ಕಿ ಹಾಕುತ್ತಿದ್ದು, ಹಾಗೂ ಇಲಾಖೆಯಲ್ಲಿ ನಡೆಯುತ್ತಿರುವ ವ್ಯವಹಾರಗಳ ಬಗ್ಗೆ ಹೊರಗಡೆ ಹೇಳಿ ಅಧಿಕಾರಿಗಳನ್ನು ಮುಜುಗರಕ್ಕೆ ಶಿಲುಕಿಸಿರುತ್ತಾರೆ, ಮತ್ತು ದಿನನಿತ್ಯ ಕೆಲಸಗಳಿಗೆ ತೊಂದರೆ ನೀಡುತ್ತಿರುತ್ತಾನೆ, ಸಹಾಯಕ ನಿರ್ದೇಶಕರಿಗೆ ನೀನು ಒಬ್ಬ ಅಂಗವಿಕಲ ನೀನು ಹೆಂಗೆ ಕೆಲಸ ಮಾಡುತ್ತೀಯಾ, ನೀನು ಬೀದಿಯಲ್ಲಿ ಆಯ್ಕೊಂಡು ತಿನ್ನಬೇಕು ಎಂದು ಕಚೇರಿಗೆ ಹೋಗಿ ಅವಾಜ್ ಹಾಕಿರುತ್ತಾನೆ

ಈ ವಿಚಾರವನ್ನು ಇಟ್ಟುಕೊಂಡು ಸಂಘಟನೆಗಳ ಜೊತೆ ಸಮಿಲಾಗಿ ಈ ರೀತಿ ವರ್ತನೆ ಮಾಡುತ್ತಿದ್ದಾನೆ, ಕಚೇರಿಯಲ್ಲಿ ಇಎಸ್ಐ / ಪಿಎಫ್ ಎಲ್ಲವನ್ನು ಇಲಾಖೆಯವರು ಸಂಬಂಧಪಟ್ಟ ಖಾತೆಗೆ ಹಾಕಿರುತ್ತಾರೆ ಕೇವಲ ಒಬ್ಬ ಮಹಿಳೆಗೆ ಮಾತ್ರ ತಾಂತ್ರಿಕ ತೊಂದರೆಯಿಂದ ಬಂದಿರುವುದಿಲ್ಲ, ಕಚೇರಿಯಿಂದ ಮಾಡಬೇಕಾದ ಕೆಲಸವೆಲ್ಲ ಮುಗಿಸಿದ್ದಾರೆ, ಈ ಕಚೇರಿಯಲ್ಲಿ ಇಲಾಖೆಯವರು ಹೇಳಿದಂತೆ ಕೇಳಬೇಕಾಗಿದ್ದ ಹೊರಗುತ್ತಿಗೆ ನೌಕರರು ವಾರ್ಡನ್ ಗಳು ಹಾಗೂ ಸಹಾಯಕ ನಿರ್ದೇಶಕರ ಕಚೇರಿಯ ಮಾಹಿತಿಗಳ ಬಗ್ಗೆ ಕೆಲವು ಸಂಘ ಸಂಸ್ಥೆಗಳಿಗೆ ತಿಳಿಸುತ್ತಾರೆ,

ಸಹಾಯಕ ನಿರ್ದೇಶಕರು ಇಂದು ನಡೆದ ಪ್ರತಿಭಟನೆಯ ವೇಳೆ ಉಪ ನಿರ್ದೇಶಕರ ಸಮ್ಮುಖದಲ್ಲಿ ನನಗೆ ಗುರುಸ್ವಾಮಿಯವರು ಹಿಂದಿನಿಂದಲೂ ಕಿರುಕುಳ ನೀಡುತ್ತಾ ಬಂದಿದ್ದಾರೆ, ನನಗೆ ಧಮ್ಕಿ ಹಾಕುತ್ತಿದ್ದಾನೆ ಎಂದು ಹೇಳಿದ್ದಾರೆ, ಆಯುಕ್ತರು ಆಗೋ ಏಜೆನ್ಸಿ ರವರು ಇವರನ್ನು ಕೆಲಸದಿಂದ ವಜಾ ಮಾಡಿದ್ದರು ಈ ರೀತಿ ಗುಂಪು ಕಟ್ಟಿಕೊಂಡು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದ್ದಾನೆ, ಈತ ಇಲಾಖೆಯ ವ್ಯವಹಾರಗಳನ್ನು ಹೊರಗಡೆ ತಿಳಿಸುತ್ತಿದ್ದು ಈತನಿಂದ ಇಲಾಖೆಗೆ ಇನ್ನೂ ನಷ್ಟವಾಗುವ ಸಂಭವ ಗಳಿವೆ, ಹಾಗಾಗಿ ಈ ಕೂಡಲೇ ಆತನನ್ನು ಸೇವೆಯಿಂದ ವಜಗೊಳಿಸಬೇಕು ಹಾಗೂ ಯಾರು ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ (ಒಬ್ಬ ಮಹಿಳೆ) ಕೆಲಸ ಮಾಡುತ್ತಿರುವವರು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವವರನ್ನು ಕೂಡ ಸೇವೆಯಿಂದ ವಜಗೊಳಿಸಬೇಕು ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ತೆಗೆದುಕೊಂಡು ಕೆಲಸ ಮಾಡಿ ಇಲಾಚಿಗೆ ಒಳ್ಳೆಯ ಹೆಸರು ತರಬೇಕೆಂದು ಕೇಳಿಕೊಳ್ಳುತ್ತೇನೆ,

ಗುರುಸ್ವಾಮಿ ಎಂಬ ನೌಕರರನ್ನು ಮತ್ತೆ ಮರು ನೇಮಕಾತಿ ತೆಗೆದುಕೊಂಡರೆ ದಲಿತ ಸಂಘರ್ಷ ಸಮಿತಿ ಕಚೇರಿಯ ಮುಂದೆ ಉಗ್ರವಾದ ಹೋರಾಟವನ್ನು ಮಾಡಿ ಆತರನ್ನು ತೆಗೆಸುವಂತಹ ಕೆಲಸ ಮಾಡಬೇಕಾಗುತ್ತದೆ, ಈತನ ಕಿರುಕುಳದಿಂದ ತಾಲೂಕಿನ ಕೆಲವು ವಾರ್ಡನ್ ಗಳು ಯಳಂದೂರನ್ನೇ ಬಿಟ್ಟು ಹೋಗಿದ್ದಾರೆ ಹಾಗಾಗಿ ಈ ಕೂಡಲೇ ಅವನನ್ನು ರದ್ದುಗೊಳಿಸಬೇಕಾಗಿ ಆಗ್ರಹಿಸುತ್ತೇವೆ ಎಂದರು.

ವರದಿ:-ಮಹಾದೇವ 

WhatsApp Group Join Now
Telegram Group Join Now
Share This Article
error: Content is protected !!