ಬೆಳಗಾವಿ : ಹೆಲ್ಮೆಟ್ ಕೇಳಿದ್ದಕ್ಕೆ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ ಎಂದು ಅವಾಜ್ ಹಾಕಿದ್ದಲ್ಲದೆ, ಸಚಿವ ಸತೀಶ್ ಜಾರಕಿಹೊಳಿ ಹೆಸರು ಹೇಳಿ ಪುಂಡಾಟ ಮೆರೆದ ಘಟನೆ ಬೆಳಗಾವಿಯ ರಾಯಬಾಗದಲ್ಲಿ ನಡೆದಿದೆ
ರಸ್ತೆ ಸಂಚಾರಿ ನಿಯಮ ಕುರಿತು ಹೆಲ್ಮೆಟ್ ವಿಚಾರವಾಗಿ ಬೈಕ್ ಹಿಡಿದ ರಾಯಬಾಗ ಪಿಎಸ್‌ಐ ಶಿವಾನಂದ ಕಾರಜೋಳ ಗೆ ಅವಾಜ್ ಹಾಕಿದ್ದಲ್ಲದೆ, ನಿನ್ನ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಬೈಕ್ ಸವಾರರು ಗೂಂಡಾ ವರ್ತನೆ ತೋರಿದ್ದಾರೆ. ಕಿಡಿಗೇಡಿಗಳು ಪೊಲೀಸ್ ಅಧೀಕಾರಿಗೆ ಆವಾಜ್ ಹಾಜುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕರ್ತವ್ಯನಿರತ ಪೊಲೀಸ್‌ಗೆ ಬೆದರಿಕೆ ಹಾಕಿ, ತಾವು ಸತೀಶ್ ಜಾರಕಿಹೊಳಿ ಕಡೆಯವರು ಎಂದು ವಿನಾಕಾರಣ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಎಳೆದು ತಂದ ಪುಂಡರು ಬೆದರಿಕೆ ಹಾಕುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.




