Ad imageAd image

ವಿಕಲಚೇತನರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನ

Bharath Vaibhav
ವಿಕಲಚೇತನರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನ
WhatsApp Group Join Now
Telegram Group Join Now

ಯಳಂದೂರು:-202324ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಶೇಷ ಚೇತನ ಮಕ್ಕಳು ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಶೇಷ ಚೇತನ ಮಕ್ಕಳಾದ ತಾಲೂಕಿನ ನಯನ ಹಾಗೂ ಐಶ್ವರ್ಯ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕ್ರೀಡಾಕೂಟದಲ್ಲಿ ನಯನ ಎಂಬ ವಿದ್ಯಾರ್ಥಿಯು ಎತ್ತರ ಜಿಗಿತದ ವೈಯಕ್ತಿಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ಗುಂಡು ಎಸೆಯುವ ವೈಯಕ್ತಿಕ ಸ್ಪರ್ಧೆಯಲ್ಲಿ ಐಶ್ವರ್ಯ ಎಂಬ ವಿದ್ಯಾರ್ಥಿಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಈ ವಿಶೇಷ ಮಕ್ಕಳಿಗೆ ತಾಲೂಕು ಬಿ ಆರ್ ಸಿ ಕೇಂದ್ರದಲ್ಲಿ ಅಭಿನಂದನೆಯನ್ನು ಸಲ್ಲಿಸಿ ಸನ್ಮಾನಿಸಲಾಯಿತು, ಈ ವಿಶೇಷ ಮಕ್ಕಳಿಗೆ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯಡಿ ಬೇಟಿ ಪಡಾವೋ ಬೇಟಿ ಬಚಾವ್ ಎಂಬ ಅಭಿಯಾನದಿಂದ 10,000 ರೂ. ಚೆಕ್ ಗಳನ್ನು ವಿತರಿಸಲಾಯಿತು.

ಈ ವೇಳೆ ಬಿ ಆರ್ ಸಿ ನಂಜುಂಡಯ್ಯ ರವರು ಮಾತನಾಡಿ ಅಂಗವಿಕಲರ ಬದುಕು ಸವಾಲಿನಿಂದ ಕೂಡಿದೆ, ಆದರೆ ಅವರಲ್ಲೂ ಸಾಮರ್ಥ್ಯ ಇದೆ. ಕೆಲವು ಸಾಮರ್ಥ್ಯ ಹೆಚ್ಚಾಗಿದ್ದರೆ ಇನ್ನೂ ಕೆಲವು ಕಡಿಮೆ ಇರುತ್ತದೆ. ಅಂಗವಿಕಲರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಾವು ಅವರಿಗೆ ನರವಾಗುತ್ತಿದ್ದೇವೆ ಎಂದು ತಿಳಿಯಬಾರದು ಅದು ನಿಮ್ಮ ಕರ್ತವ್ಯ. ಸರ್ಕಾರದ ಎಲ್ಲಾ ಯೋಜನೆ ಸೌಲಭ್ಯಗಳನ್ನು ಪಾರದರ್ಶಕತೆಯಿಂದ ವಿಳಂಬವಾಗದಂತೆ ಅವರಿಗೆ ತಲುಪಿಸುವ ಕೆಲಸವಾಗಬೇಕು, ಅಂಗವಿಕಲರಿಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು ಎಲ್ಲರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಂಜುಂಡಸ್ವಾಮಿ ಸತೀಶ್ ರಂಗಸ್ವಾಮಿ ಬಿ.ಐ.ಈ.ಆರ್.ಟಿ. ಮಧು,ಪುಷ್ಪಲತಾ, ನಂಜುಂಡಸ್ವಾಮಿ,ರೇಚಣ್ಣ, ಪೋಷಕರು ಹಾಗೂ ಮುಂತಾದವರು ಹಾಜರಿದ್ದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!