ಸಿರುಗುಪ್ಪ : ನಗರದ ಎಸ್.ಇ.ಎಸ್ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೋಲೀಸ್ ಇಲಾಖೆಗಳ ಸಹಯೋಗದಲ್ಲಿ ನಡೆದ ಮಾದಕ ವಸ್ತು ಮುಕ್ತ ಸಮಾಜದ ಸಂಕಲ್ಪ ಮತ್ತು ಎನ್.ಡಿ.ಪಿ.ಎಸ್ ಕಾಯ್ದೆಯ ಅರಿವು ಕಾರ್ಯಕ್ರಮವನ್ನು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಅಶೋಕ್.ಆರ್.ಹೆಚ್, ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ದೇಶದಲ್ಲಿ ಮಾದಕ ವಸ್ತು ಸಾಮಾಜಿಕ ಪಿಡುಗಾಗಿದ್ದು, ಅದರ ಅರಿವು ಮೂಡಿಸುವ ಕಾರ್ಯದಲ್ಲಿ ಕಾನೂನು ಸೇವೆಗಳ ಸಮಿತಿ ಜೊತೆಯಲ್ಲೇ ಪೋಲೀಸ್ ಮತ್ತು ಶಿಕ್ಷಣ ಇಲಾಖೆಗಳ ಪಾತ್ರವು ಅಗತ್ಯವಾಗಿದೆ.
ಗಾಂಜಾದಂತಹ ಮಾದಕ ವಸ್ತು ಹಾಗೂ ಮದ್ಯಪಾನದಿಂದಾಗಿ ಯುವ ಪೀಳಿಗೆಯು ವ್ಯಸನಿಗಳಾಗಿ ನಮ್ಮ ಸಮಾಜದಲ್ಲಿ ದುರ್ಬಲವ್ಯಾಗುತ್ತಿದೆ. ಬಲಿಷ್ಠ ಭಾರತದ ನಿರ್ಮಾಣಕ್ಕೆ ಯುವಶಕ್ತಿ ಅಗತ್ಯವಾಗಿದೆ.
ಆದಕಾರಣ ನೀವೆಲ್ಲಾ ದೃಡ ಸಂಕಲ್ಪದಿಂದ ಮಾದಕ ವಸ್ತುವಿನಿಂದ ದೂರವಿದ್ದು, ನಿಮ್ಮವರಿಗೂ ಜಾಗೃತಿ ಮೂಡಿಸಿ ಮಾದಕ ಮುಕ್ತ ಸಮಾಜ ನಿರ್ಮಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆಂದು ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಶಿವರಾಜ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ಪ್ಯಾನಲ್ ವಕೀಲರಾದ ಎನ್.ಅಬ್ದುಲ್‌ಸಾಬ್, ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು,
ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ, ದೈಹಿಕ ಶಿಕ್ಷಣಾಧಿಕಾರಿ ರಮೇಶ್, ಕಾಲೇಜಿನ ಪ್ರಾಂಶುಪಾಲರಾದ ಐ.ದಿವಾರಕರ ರಾವ್, ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ್.ಎಮ್, ಪ್ಯಾನಲ್ ವಕೀಲರಾದ ವೆಂಕಟೇಶ ನಾಯ್ಕ್, ಮಲ್ಲಿಗೌಡ, ರುದ್ರಮುನಿ, ವಕೀಲರಾದ ಗಂಗಾಧರ ಹಾಗೂ ಕಾಲೇಜಿನ ಉಪನ್ಯಾಸ ವರ್ಗ, ವಿದ್ಯಾರ್ಥಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ