Ad imageAd image

ಇರಾನ್’ನ ಸರ್ವೋಚ್ಚ ನಾಯಕನನ್ನಾಗಿ ಅಯತೊಲ್ಲಾ ಅರಾಫಿ ನೇಮಕ

Bharath Vaibhav
ಇರಾನ್’ನ ಸರ್ವೋಚ್ಚ ನಾಯಕನನ್ನಾಗಿ ಅಯತೊಲ್ಲಾ ಅರಾಫಿ ನೇಮಕ
WhatsApp Group Join Now
Telegram Group Join Now

ತೆಹ್ರಾನ್: ಇರಾನ್‌ನ ದೀರ್ಘಕಾಲದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ಅವರ ನಿಧನದ ಬೆನ್ನಲ್ಲೇ, ದೇಶದ ಅತ್ಯುನ್ನತ ಸ್ಥಾನಕ್ಕೆ ಅಯತೊಲ್ಲಾ ಅರಾಫಿ ಅವರನ್ನು ಮಧ್ಯಂತರ ಸರ್ವೋಚ್ಚ ನಾಯಕನನ್ನಾಗಿ (Interim Supreme Leader) ನೇಮಕ ಮಾಡಲಾಗಿದೆ.

ದಿರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಲಿ ಖಮೇನಿ ಅವರ ನಿಧನವು ಇರಾನ್ ಮಾತ್ರವಲ್ಲದೆ ಇಡೀ ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ದೇಶದಲ್ಲಿ ಉಂಟಾಗಬಹುದಾದ ಅಸ್ಥಿರತೆಯನ್ನು ತಡೆಯಲು ಇರಾನ್‌ನ ಪ್ರಭಾವಿ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ತಕ್ಷಣವೇ ಸಭೆ ಸೇರಿ, ಹಿರಿಯ ಧಾರ್ಮಿಕ ವಿದ್ವಾಂಸರಾದ ಅಯತೊಲ್ಲಾ ಅರಾಫಿ ಅವರಿಗೆ ತಾತ್ಕಾಲಿಕವಾಗಿ ದೇಶದ ಚುಕ್ಕಾಣಿ ವಹಿಸಲು ನಿರ್ಧರಿಸಿದೆ.

ಯಾರು ಈ ಅಯತೊಲ್ಲಾ ಅರಾಫಿ?

ಅಯತೊಲ್ಲಾ ಅರಾಫಿ ಅವರು ಇರಾನ್‌ನ ಶೈಕ್ಷಣಿಕ ಮತ್ತು ಧಾರ್ಮಿಕ ವಲಯದಲ್ಲಿ ಅತೀವ ಪ್ರಭಾವ ಹೊಂದಿರುವ ವ್ಯಕ್ತಿ. ಅವರು ಈ ಹಿಂದೆ ಇರಾನ್‌ನ ಪ್ರಸಿದ್ಧ ಧಾರ್ಮಿಕ ಶಿಕ್ಷಣ ಸಂಸ್ಥೆಗಳ (Seminaries) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಖಮೇನಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಇವರು, ಈಗ ದೇಶದ ಸಂಕಷ್ಟದ ಸಮಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!