Ad imageAd image

ಅಯತೊಲ್ಲಾ ಎರಡು ಕಾಲು ಕಟ್ : ಕೋಮಾಗೆ ಜಾರಿದ ಇರಾನ್‌ನ ನೂತನ ಸರ್ವೋಚ್ಚ ನಾಯಕ

Bharath Vaibhav
ಅಯತೊಲ್ಲಾ ಎರಡು ಕಾಲು ಕಟ್ : ಕೋಮಾಗೆ ಜಾರಿದ ಇರಾನ್‌ನ ನೂತನ ಸರ್ವೋಚ್ಚ ನಾಯಕ
WhatsApp Group Join Now
Telegram Group Join Now

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇರಾನ್ ದೇಶಕ್ಕೆ ಚೇತರಿಸಿಕೊಳ್ಳಲಾಗದ ಆಘಾತವೊಂದು ಎದುರಾಗಿದೆ.

ಇರಾನ್‌ನ ನೂತನ ಸರ್ವೋಚ್ಚ ನಾಯಕ (Supreme Leader) ಅಯತೊಲ್ಲಾ ಮೊಜ್ತಾಬಾ ಖಮೇನಿ ಅವರು ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಕೋಮಾಗೆ ಜಾರಿದ್ದಾರೆ ಎಂದು ವರದಿಯಾಗಿದೆ.

ಇರಾನ್‌ನ ನೂತನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಾಬಾ ಖಮೇನಿ ವಾಯುದಾಳಿಯೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ದೇಶವು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದೆ.56 ವರ್ಷದ ಮೊಜ್ತಾಬಾ ಖಮೇನಿ ಅವರು ವಾಯುದಾಳಿಯ ನಂತರ ಕೋಮಾಗೆ ಜಾರಿದ್ದಾರೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಅವರು ತಮ್ಮ ಒಂದು ಅಥವಾ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಹೊಟ್ಟೆ ಅಥವಾ ಯಕೃತ್ತಿಗೆ (Liver) ತೀವ್ರ ಹಾನಿಯಾಗಿದೆ ಎಂದು ‘ದ ಸನ್’ ಪತ್ರಿಕೆ ವರದಿ ಮಾಡಿದೆ.

ಕಳೆದ ಸೋಮವಾರವಷ್ಟೇ ಅವರು ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ತಂದೆ ಮತ್ತು ಪತ್ನಿ ಫೆಬ್ರವರಿ 28 ರಂದು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟಿದ್ದರು. ಈ ಘಟನೆಯೇ ಯುದ್ಧಕ್ಕೆ ನಾಂದಿ ಹಾಡಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!