ಅಯೋಧ್ಯೆ: ಇಂದು ದೇಶಾದ್ಯಂತ ಶ್ರೀ ರಾಮನವಮಿ ಸಂಭ್ರಮ. ಎಲ್ಲೆಲ್ಲೂ ರಾಮ ಜಪ ಮೊಳಗುತ್ತಿದೆ. ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ. ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮನವಮಿಯ ಸಡಗರ ಮತ್ತಷ್ಟು ಮನೆಮಾಡಿದೆ. ಭಕ್ತಿಭಾವದಿಂದ ರಾಮಮಂದಿರದತ್ತ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ಅಯೋಧ್ಯೆ ಬಾಲರಾಮ ಮಂದಿರದಲ್ಲಿ ರಾಮನವಮಿ ಹಿನ್ನೆಲೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿದೆ. ಇದೇ ವೇಳೆ ಮಂದಿರದ ಗರ್ಭಗುಡಿ ಪ್ರವೇಶಿಸಿದ ಸೂರ್ಯ ಕಿರಣಗಳು ಬಾಲರಾಮನಿಗೆ ಸೂರ್ಯ ತಿಲಕವಿಟ್ಟಿದ್ದು ವಿಶೇಷ.
ಶ್ರೀ ರಾಮ ನವಮಿ ಹಿನ್ನೆಲೆಯಲ್ಲಿ ಬಾಲರಾಮನ ಹಣೆಗೆ ಸೂರ್ಯ ತಿಲಕವಿಟ್ಟಿದ್ದು, ಈ ವೇಳೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಲಾಯಿತು. ಈ ಅದ್ಭುತ ದೃಶ್ಯವನ್ನು ನೆರೆದಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.