ಬೆಂಗಳೂರು: ಕಲಬುರ್ಗಿ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ೨೧ ನೇ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ ಫೆಬ್ರವರಿ ೨೦,೨೧-೨೦೨೫ರಂದು ಗುರುವಾರ, ಶುಕ್ರವಾರ ಕಲಬುರ್ಗಿ ನಗರದ ಬಾಪುಗೌಡ ದರ್ಶನಾಪೂರ ರಂಗಮಂದಿರ ಕನ್ನಡ ಭವನ ನಡೆಯಲಿರುವ ಸಮ್ಮೇಳನದಲ್ಲಿ ‘ಸಮ್ಮೇಳನಾಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ’ ಚೇರ ಪಸ೯ನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರ್ಗಿ ಇವರ ಅಮೃತ ಹಸ್ತದಿಂದ ಗೌರವ ಸನ್ಮಾನ ಜರುಗಲಿವೆ.
ರಾಜ್ಯಾಧ್ಯಕ್ಷರು ನಾಡೋಜ ಡಾ. ಮಹೇಶ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವರು ಪ್ರಿಯಾಂಕಾ ಎಂ. ಖರ್ಗೆ, ಕಲಬುರ್ಗಿ ಜಿಲ್ಲಾ ದಕ್ಷಿಣ ಶಾಸಕ ಅಲ್ಲಮ ಪ್ರಭು ಪಾಟೀಲ್, ಕಲಬುರ್ಗಿ ಉತ್ತರ ಶಾಸಕಿ ಶ್ರೀಮತಿ ಖನೀಜ್ ಫಾತೀಮಾ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ತೇಗಲತಪ್ಪಿ, ಸೇರಿದಂತೆ ಮುಂತಾದವರ ಸಮ್ಮುಖದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಕನ್ನಡ ಜಾತ್ರೆ ಭುವನೇಶ್ವರಿ ಭಾವಚಿತ್ರಕ್ಕೆ ರಾಜ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಮಾರಂಭ ನಡೆಯಲಿದೆ ಸಮಾರಂಭದಲ್ಲಿ ಭಾರತ ವೈಭವ ಪತ್ರಿಕೆಯ ಆಲ್ರೌಂಡರ್ ರಿಪೋರ್ಟರ್ ಪ್ರಶಸ್ತಿ ಪುರಸ್ಕೃತರಾದ ಅಯ್ಯಣ್ಣ ಮಾಸ್ಟರ್ ರವರಿಗೆ ಗೌರವ ಸನ್ಮಾನ ಮಾಡಲಾಗುವುದು.
ಎಂದು ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ತೇಗಲತಪ್ಪಿ ಮತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ತೆಂಗಳಿ ಅವರು ಜಿಂಟಿಯಾಗಿ ಭಾರತ ವೈಭವ ಪತ್ರಿಕೆಯ ಪ್ರತಿನಿಧಿ ಅಯ್ಯಣ್ಣ ಮಾಸ್ಟರ್ ಬೆಂಗಳೂರು ಜೊತೆಗೆ ಮಾತನಾಡಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.




