ಬೆಂಗಳೂರು: ಭಾರತೀಯ ಭಾಷೆಗಳಲ್ಲೇ ಕನ್ನಡ ಅತ್ಯಂತ ಶ್ರೀಮಂತ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ನಮ್ಮ ಕನ್ನಡ ಭಾಷೆಯನ್ನು ಶ್ರೀ ಮಂತಗೊಳಿಸಿದ ನಾಡಿನ ಎಲ್ಲಾ ಸಾಹಿತಿಗಳು , ಬರಹಗಾರರು,ಕವಿಗಳನ್ನು ಸ್ಮರಿಸುವುದು ನಮ್ಮೇಲ್ಲರ ಕರ್ತವ್ಯ ನಮ್ಮ ಕನ್ನಡ ನಾಡಿನ ನೆಲ ಜಲ ಭಾಷೆಯ ಬಗ್ಗೆ ಗೌರವ ಇರಲಿ ನಮ್ಮ ಕನ್ನಡ ಭಾಷೆಗೆ ತಾಯಿಯ ಸ್ಥಾನವನ್ನು ನೀಡಬೇಕು ಎಂದು ಶೆಟ್ಟಿಹಳ್ಳಿ ವಾರ್ಡಿನ ಬಿಜೆಪಿ ಅಧ್ಯಕ್ಷ ಬಿ. ಸುರೇಶ್ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವಿಘ್ನೇಶ್ವರ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಮಾಜಿ ಅಧ್ಯಕ್ಷ ಸಿ ಎಸ್.ಆರಾಧ್ಯ, ಹಾಲಿ ಅಧ್ಯಕ್ಷ ಮಹಾಂತೇಶ್ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ 70ನೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ವಾರ್ಡಿನ ಬಿಜೆಪಿ ಅಧ್ಯಕ್ಷ ಬಿ. ಸುರೇಶ್ ಮಾತನಾಡಿದರು. ಮಾಜಿ ಅಧ್ಯಕ್ಷ ಸಿ.ಎಸ್ ಆರಾಧ್ಯ ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಾಮಲಿಂಗೇಗೌಡ್ರು, ಚಿಕ್ಕಬಾಣವಾರದ ವೀರ ಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಂ ಎಚ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಕಿರಣ್,ಎಂ. ಮುನಿರಾಜು,ಬಿ. ಶ್ರೀನಿವಾಸ್, ಗೋವೀಂದರಾಜು, ಹೆಚ್. ಎಸ್ ನಾಗೇಶ್, ನಂದಲಾಲ್, ಪ್ರಭಾಕರ್ ಶಾಸ್ತ್ರಿ, ಮಹೇಶ್ ಅಂಗಡಿ,ಅರವೀಂದ ಪ್ರಸಾದ್ ಸಿಂಗ್ ಸೇರಿದಂತೆ ವಿಘ್ನೇಶ್ವರ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಪದಾಧಿಕಾರಿಗಳು ಸದಸ್ಯರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




