ಬೆಂಗಳೂರು: ಜಾತಿಗಣತಿ ವರದಿ ವಿಚಾರವಾಗಿ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಾತಿಗಣತಿಯನ್ನು ಸಿಎಂ ಸಿದ್ದರಾಮಯ್ಯ ಪಗಡೆಯಾಟ ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಎಸ್ ಸಿ ಅಭ್ಯರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ವಿಜಯೇಂದ್ರ, ಎಲ್ಲಿ ತಮ್ಮ ಕುರ್ಚಿ ಅಲುಗಾಡುತ್ತೋ ಆಗ ಸಿಎಂ ಸಿದ್ದರಾಮಯ್ಯ ಜಾತಿಗಣತಿ ಎನ್ನುತ್ತಾರೆ.ಜಾತಿಗಣತಿಯನ್ನು ಪಗಡೆ ಆಟ ಅಂದುಕೊಂಡಿದ್ದಾರೆ ಎಂದರು.
ಕೆಪಿಎಸ್ ಸಿ ಸಮಸ್ಯೆಯಿಂದಾಗಿ ಇಂದು ಅಭ್ಯರ್ಥಿಗಳು ಬೀದಿಗಿಳಿದು ಹೋರಾಟ ನಡೆಸುವಂತಾಗಿದೆ. ಕೆಪಿಎಸ್ ಸಿಯಿಂದ ಪದೇ ಪದೇ ಪ್ರಶ್ನೆ ಪತ್ರಿಕೆ ತಪ್ಪಾಗಿ ಮುದ್ರಿಸಲಾಗುತ್ತಿದೆ. ನಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಗಳಿಗೆ ಬೆಂಬಲ ನೀದುತ್ತಿದ್ದೇವೆ.
ಒಂದು ಪಕ್ಷ ರಾಜ್ಯಾಧ್ಯಕ್ಷನಾಗಿಯೋ ಅಥವಾ ಶಾಸಕನಾಗಿಯೋ ನಾನಿಂದು ಇಲ್ಲಿಗೆ ಬಂದಿಲ್ಲ. ಕೆಪಿಎಸ್ ಸಿ ಅಭ್ಯರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದೇನೆ ಎಂದು ಹೇಳಿದರು.