ಬೆಂಗಳೂರು: ಜೋಶ್ ಬಟ್ಲರ್ ಅವರ ಅಜೇಯ, ಆಕರ್ಷಕ ಅರ್ಧ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ 8 ವಿಕೆಟ್ ಗಳ ಸುಲಭ ಗೆಲುವು ಪಡೆಯಿತು.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 169 ರನ್ ಗಳಿಸಿತು. ಪ್ರತಿಯಾಗಿ ಆಡಿದ ಗುಜರಾತ್ ಟೈಟನ್ಸ್ 17.5 ಓವರುಗಳಲ್ಲಿ 2 ವಿಕೆಟ್ ಗೆ 170 ರನ್ ಗಳಿಸಿ ಸುಲಭ ಗೆಲುವು ತನ್ನದಾಗಿಸಿಕೊಂಡಿತು.
ಸ್ಕೋರ್ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರುಗಳಲ್ಲಿ 8 ವಿಕೆಟ್ ಗೆ 169
ಲೆವಿಂಗ್ಸಟನ್ 54 ( 40 ಎಸೆತ, 1 ಬೌಂಡರಿ, 5 ಸಿಕ್ಸರ್), ಜಿತೇಶ ಶರ್ಮಾ 33, 21 ಎಸೆತ, 5 ಬೌಂಡರಿ, 1 ಸಿಕ್ಸರ್)
ಟಿಮ್ ಡೆವಿಡ್ 32 ( 18 ಎಸೆತ, 3 ಬೌಂಡರಿ, 2 ಸಿಕ್ಸರ್), ಮೊಹ್ಮದ ಸಿರಾಜ್ 19 ಕ್ಕೆ 3)
ಗುಜರಾತ್ ಟೈಟನ್ಸ್ 17.5 ಓವರುಗಳಲ್ಲಿ 2 ವಿಕೆಟ್ ಗೆ 170
ಜೋಶ್ ಬಟ್ಲರ್ ಅಜೇಯ 73 (39 ಎಸೆತ, 5 ಬೌಂಡರಿ, 6 ಸಿಕ್ಸರ್)
ಸಾಯಿ ಸುದರ್ಶನ್ 49 ( 36 ಎಸೆತ, 7 ಬೌಂಡರಿ, 1 ಸಿಕ್ಸರ) ಭುವನೇಶ್ವರ ಕುಮಾರ್ 23 ಕ್ಕೆ 1)