ಬೆಂಗಳೂರು:ದೇಶದಲ್ಲಿ ದಿನದಿಂದ ದಿನಕ್ಕೆ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕಿರುಕುಳ ಅತ್ಯಾಚಾರ ವಿರುದ್ಧ ಜನರಲ್ಲಿ ಮತ್ತು ಮಹಿಳೆಯರಲ್ಲಿ ಅರಿವು ಮೂಡಿಸುವ ಸಲುವಾಗಿ ‘ಜಾಗೃತೆ ರಹೋ ಭಾರತ್ ಯಾತ್ರಾ’ ಕೈಗೊಂಡಿದ್ದೇವೆ ಎಂದು ಜಾಗೃತೆ ರಹೋ ಭಾರತ್ ಯಾತ್ರಾ’ ಮುಖ್ಯಸ್ಥರ ರಾಜೇಂದ್ರ ಕುಮಾರ್ ಹೇಳಿದರು.
ಅವರು ಬೆಂಗಳೂರು ನಗರದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಾವೇರಿ ನಗರದಲ್ಲಿರುವ ಐಪಿಡಿಪಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಮೇಲೆ ದೌರ್ಜನ್ಯ ಆಗುತ್ತಿರುವುದನ್ನು ಕಡಿವಾಣ ಹಾಕಲು ಮಹಿಳೆಯರ ಜಾಗೃತಿ ರಹೋ ಭಾರತ್ ಯಾತ್ರಾ ಅಭಿಯಾನ ಮುಖ್ಯಸ್ಥ ರಾಜೇಂದ್ರ ಕುಮಾರ್ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರು ನಗರ ಕಾವೇರಿ ನಗರಕ್ಕೆ ಆಗಮಿಸಿದ ಜಾಗೃತಿ ರಹೋ ಭಾರತ್ ಯಾತ್ರಾ ಮುಖ್ಯಸ್ಥ ರಾಜೇಂದ್ರ ಕುಮಾರ್ ಅವರನ್ನು ಐಪಿಡಿಪಿ ಸಂಸ್ಥೆ ಮುಖ್ಯಸ್ಥರು ಆಡಳಿತ ಮಂಡಳಿಯರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಐಪಿಡಿಪಿ ಸಂಸ್ಥಯ ನಿರ್ದೇಶಕ ಪಾರ್ಥಸಾರಥಿ, ಹಣಕಾಸು ವ್ಯವಸ್ಥಾಪಕಿ ಪ್ರಕೃತಿ, ಖಜಾಂಚಿ ಮಂಜುಳಾ ಕೆ. ಎನ್, ಸಂಯೋಜಕಿ ಶಿವಮ್ಮ ,ಸ್ವ ಸಹಾಯ ಸಂಘ ಕಾರ್ಯದರ್ಶಿ ಚಿದಾನಂದ ಎಚ್. ಬಿ, ಸೇರಿದಂತೆ ವಿವಿಧ ಕಡೆಗಳಿಂದ
ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಸಿಬ್ಬಂದಿ ವರ್ಗದವರು ಸಾರ್ವಜನಿಕ ಮಹಿಳೆಯರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್