ಬೈಲಹೊಂಗಲ : ಹೌದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ರೈತ ಪರ ಹೋರಾಟಗಾರ ದಿ. ಬಾಬಾ ಗೌಡ ಪಾಟೀಲರ ಜನ್ಮ ದಿನಾಚರಣೆಯು ನಿನ್ನೆ ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಿಕ್ಕ ಬಾಗೇವಾಡಿ ಗ್ರಾಮದಲ್ಲಿ ಅಖಂಡ ರಾಜ್ಯ ರೈತ ಸಂಘ ಹಾಗೂ ಬಾಬಾ ಗೌಡ ಪಾಟೀಲರ ಅಭಿಮಾನಿಗಳು ಒಟ್ಟಾಗಿ ಅದ್ದೂರಿಯಾಗಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಬಾಬಾ ಗೌಡ ಪಾಟೀಲರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಶ್ಯಾಅಂದಿಲೇಶ್ವರ ಸ್ವಾಮೀಜಿ, ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಧರ್ಮ ರಾಜ್ ಗೌಡರ್, ಮಾಜಿ ಸಚಿವ ಶಶಿಕಾಂತ ನಾಯಕ್, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ರೋಹಿಣಿ ಬಾಬಾ ಸಾಹೇಬ್ ಪಾಟೀಲ್, ಪಡೆಪ್ಪ ಬೋಗುರು, ಹಿರಿಯ ಪತ್ರಕರ್ತ ಪ್ರದೀಪ್ ಮೇಲಿನಮನಿ, ಸುಪುತ್ರಿ ನೀಲಾಂಬಿಕ, ಪ್ರವೀಣ್ ಗೌಡ ಪಾಟೀಲ್ ಮಾತನಾಡಿದರು, ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ವಿವಿಧ ಮಾಜಿ ಸೈನಿಕರು, ಪದಾಧಿಕಾರಿಗಳು ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಪ್ರದೀಪ್ ಮೇಲಿನಮನಿ ಹಾಗೂ ಜನಪ್ರಿಯ ಪತ್ರಕರ್ತ ಬಸವರಾಜು ಹಾಗೂ Apmc ಅಧಿಕಾರಿಗಳನ್ನು ಸನ್ಮಾನ ಮಾಡಿದರು. ಒಟ್ಟಾರೆ ಅದ್ದೂರಿಯಾಗಿ ಅಪಾರ ಅಭಿಮಾನಿಗಳ ನಡುವೆ ಬಾಬಾ ಗೌಡ ಪಾಟೀಲರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.