ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಯ ಬಬಲಾದಿ ಮಠದ ಶ್ರೀ ಶಿವುರುದ್ರಯ್ಯ ಮಹಾದೇವಯ್ಯ ಸ್ವಾಮಿಗಳು ಸೋಮವಾರ ಐಗಳಿ ಗ್ರಾಮಕ್ಕೆ ಆಗಮಿಸಿದರು.
ಪ್ರತಿ ವರ್ಷ ಗ್ರಾಮದಲ್ಲಿ ಯುಗಾದಿ ನಂತರ ಪ್ರತಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವುದು ಮಠದ ವಾಡಿಕೆ ಅದರಂತೆ ಅವರು ಸೋಮವಾರ ಸಂಜೆ ಗ್ರಾಮದ ಬಬಲಾದಿ ಮಠಕ್ಕೆ ಆಗಮಿಸಿದರು.
ಗ್ರಾಮಸ್ಥರೆಲ್ಲರೂ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಶ್ರೀಗಳನ್ನು ಸ್ವಾಗತಿಸಿದರು ಈ ಸಂದರ್ಭದಲ್ಲಿ ಭೀಮು ಸಿಂಗೆ ಕೊಂಬು ಪಡೆಯುವವರು ಚಿಕ್ಕಪಡಸಲಗಿ. ಅಪ್ಪಯ್ಯ ಸ್ವಾಮಿ ಅರ್ಚಕರಾದ ಸಾಬಣ್ಣ ಹಾಲಳ್ಳಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಎಲ್ಲಪ್ಪ ಮಿರ್ಜಿ ಪುಂಡಲಿಕ ಮಾದರ ಹಲಗಿವಾದ ರಾಜ್ಯ ಮಟ್ಟದ ಪ್ರಶಸ್ತಿ ಭಾಜನರು. ಸದಾಶಿವ ಸಿಂಧೂರ್ ಚಿದಾನಂದ್ ಸಿಂದೂರ್ ಭೀಮು ಸಿಂಧೂರ್ ಸದಾಶಿವ ಹಾಲಳ್ಳಿ ದರ್ಶನ್ ಮಾಳಿ ಭೀಮು ಮಾಳಿ ಬಸು ಮಾಳಿ ರಾಚಪ್ಪ ಮಾದರ್ ಹಾಗೂ ಸಮಸ್ತ ಐಗಳಿ ಗ್ರಾಮದ ಬಬಲಾದಿ ಮಠದ ಶ್ರೀ ಭಕ್ತರು ಉಪಸ್ಥಿತರಿದ್ದರು.