Ad imageAd image

ದೀಪು-ದೀಕ್ಷಾ ಹಾಗೂ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಇದೇ 14ರಂದು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ವಿಶಿಷ್ಟ ಆಚರಣೆ

Bharath Vaibhav
ದೀಪು-ದೀಕ್ಷಾ ಹಾಗೂ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಇದೇ 14ರಂದು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ವಿಶಿಷ್ಟ ಆಚರಣೆ
WhatsApp Group Join Now
Telegram Group Join Now

ಇಳಕಲ್ಲ: ಇಳಕಲ್ಲ ನಗರದಲ್ಲಿ ಪ್ರತಿವರ್ಷ ಆಚರಿಸುವಂತೆ ಈ ವರ್ಷವೂ ಸಂವಿಧಾನದ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಈವರ್ಷ ಇದೇ 14ರಂದು ನಗರದಲ್ಲಿ ವಿಶಿಷ್ಟವಾಗಿ ಅಂಬೇಡ್ಕರ್ ಜಯಂತಿ ಆಚರಣೆಗೆ ನಗರ ದೀಪು-ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಯಿಂದ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘ,ಭೀಮ್ ಆರ್ಮಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಗೆ ನಡೆಯುತ್ತದೆ ಎಂದು ಅಶೋಕ ಚಲವಾದಿ ತಿಳಿಸಿದ್ದರು.

ನಗರದ ಬೋರಾ ಪ್ಲಾಟ್ ನಲ್ಲಿ ಇರುವ ದೀಪು ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಶೋಕ ಚಲವಾದಿ,ಅವರ ಗೃಹಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಹಿರಿಯರು ದಲಿತ ಮುಖಂಡರದ ಗಿರೀಶ್ ಅಚನೂರ ಮಾತನಾಡಿ ದೀಪು ದೀಕ್ಷಾ ಸಂಸ್ಥೆ ವತಿಯಿಂದ ನಗರದ ಕಂಠೀರವೃತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮೆರವಣಿಗೆ ಮಾಡಲಾಗುವುದು ನಂತರ ಪ್ರಮುಖ ವೃತ್ತಗಳಾದ ಕಂಠಿ ವೃತ್ತ,ಗಾಂಧಿಚೌಕ,ಬಸವಣ್ಣದೇವರ ಗುಡಿ,ಬನ್ನಿಕಟ್ಟಿ,ಗೊರಬಾಳ ನಾಕ, ಜಯಂತಿ ಪ್ರಯುಕ್ತ ಅನ್ನ ಪ್ರಸಾದ ವ್ಯವಸ್ಥೆ ಇದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊಂಡರು

ನಂತರ ಹಿರಿಯರು ಇಳಕಲ್ಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಹಾದೇವ ಕಂಬಾಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಂಬೇಡ್ಕರ್ ಅವರ ಜೀವನ ಯಶೋಗಾಥೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ೧೪ ರಂದು ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದೇವೆ ಹಾಗೂ ದೀಪು-ದೀಕ್ಷಾ ಸಂಸ್ಥೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ 14ರಂದು ನಗರದ ಕಂಠೀರವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನಂತರ ಸಂಜೆ ಭಾವಚಿತ್ರ ಮೆರವಣಿಗೆ ಹಾಗೂ ಅನ್ನಪ್ರಸಾದ್ ವ್ಯವಸ್ಥೆ ಯುವಕರಿಂದ ಬೈಕ್ ರ್ಯಾಲಿ ಇರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಗರದ ಸಾರ್ವಜನಿಕರು ಆಗಮಿಸಬೇಕೆಂದು ವಿನಂತಿಸದರು.

ದೀಪು- ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸವಿತಾ ಅಶೋಕ ಚಲವಾದಿ, ಮಾತನಾಡಿ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತೇವೆ ಆದರೆ ಈ ಬಾರಿ ಜಯಂತಿ ವಿಶೇಷ ರೀತಿಯಲ್ಲಿ ಆಚರಣೆ ಮಾಡಲು ಸಂಘದ ಪದಾಧಿಕಾರಿ ನಿರ್ಧರಿಸಿದ್ದು ಈ ಕಾರ್ಯಕ್ರಮಕ್ಕೆ ನಗರದ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾತಿಭೇದ ಮರೆತು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು

ನಂತರ ಬೀದಿಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪವಾಡೇಪ್ಪ ಚಲವಾದಿ ಮಾತನಾಡಿ 14ರಂದು ಮುಂಜಾನೆ ಕಂಠೀ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಂಜೆ ಬೀದಿಬದಿ ವ್ಯಾಪಾರಸ್ಥರ ಸಂಘ ಹಾಗೂ ದೀಪು ದೀಕ್ಷಾ ಸಂಸ್ಥೆ ಮತ್ತು ಭೀಮ ಆರ್ಮಿ ವತಿಯಿಂದ ಡಿಜೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು ಎಂದರು.

ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷರಾದ ಮಹಾಂತೇಶ್ ಚಲವಾದಿ ಮಾತನಾಡಿ 14 ರಂದು ನಡೆಯಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ವತಿಯಿಂದ ನಮ್ಮ ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುತ್ತೇವೆ
ಎಂದರು
ಇದೇ ಸಂದರ್ಭದಲ್ಲಿ ಮಹಾದೇವ ಕಂಬಾಗಿ,ಅಶೋಕ ಚಲವಾದಿ,ಸವಿತಾ ಚಲವಾದಿ,ಬಸಪ್ಪ ಬೂದಿಹಾಳ,
ಪವಾಡೇಪ್ಪ ಚಲವಾದಿ,ಸ್ಯಾಮ ಮುದೋಳ,ಮರಿಯಪ್ಪ ಮಾದರ,
ಶರಣಪ್ಪ ರೋಣದ,ಚಂದ್ರು ನಾರಾಯಣಿ,ರಾಜು ಇಲಕಲ್ಲ,ಮಾಂತು ನಾರಾಯಣಿ,ಮಹಾಂತೇಶ ಚಲವಾದಿ,ನಾರಾಯಣ ಸಾವಜಿ,ಮಹಾಂತೇಶ ಚಲವಾದಿ,ರಮೇಶ ಬೊಮ್ಮಣಗಿ,ಶೇಖಪ್ಪ ಚಲವಾದಿ,ಬಸು ಪಾಟೀಲ್,ಇಮ್ರಾನ,ರಾಜು
ಪತ್ತಾರ,ಶ್ರೀನಿವಾಸ ಬಡಗೇರ,ಬಸು ಮೇಸ್ತ್ರಿ ಚಲವಾದಿ,ಪವನ ಪವಾರ,ಮಲ್ಲಯ್ಯ ತೆಗ್ಗಿನಮಠ,ವೆಂಕಟೇಶ ಜುಲಕುಂಟಿ,
ಹಾಗೂ ದೀಪು- ದೀಕ್ಷಾ ಕ್ರೀಡಾ ಮತ್ತು ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!