Ad imageAd image

ಭಾರತದ ಭಾಗ್ಯವಿದಾತರು ಬಾಬಾ ಸಾಹೇಬ್ ಅಂಬೇಡ್ಕರ್ ಡಾಕ್ಟರ್ ಬಾಬು ಜಗಜೀವನ್ ರಾಮ್ : ನಂದಕುಮಾರ್ ಬಾಂಬೆಕರ್

Bharath Vaibhav
ಭಾರತದ ಭಾಗ್ಯವಿದಾತರು ಬಾಬಾ ಸಾಹೇಬ್ ಅಂಬೇಡ್ಕರ್ ಡಾಕ್ಟರ್ ಬಾಬು ಜಗಜೀವನ್ ರಾಮ್ : ನಂದಕುಮಾರ್ ಬಾಂಬೆಕರ್
WhatsApp Group Join Now
Telegram Group Join Now

ವಿಜಯಪುರ: ಹಸಿರು ಕ್ರಾಂತಿ ಹರಿಕಾರ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ ಬಾಬು ಜಗಜೀವನ್ ರಾಮ್ ಅವರ ಆದರ್ಶಗಳು ಮತ್ತು ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ. ಅವರ ವ್ಯಕ್ತಿತ್ವ ಹಾಗೂ ನಡೆದು ಬಂದ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಮಾದಿಗ ಯುವ ಸೇನೆಯ ಅಧ್ಯಕ್ಷರಾದ ನಂದಕುಮಾರ್ ಬಾಂಬೆಕರ್ ಹೇಳಿದರು.

ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಬಾಬು ಜಗಜೀವತ್ ರಾಮ್ ಜಯಂತ್ಯೋತ್ಸವ ಮತ್ತು ಮಾದಿಗ ಯುವ ಸೈನ್ಯ ಶಾಖ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಭಾರತದ ಎರಡು ನಕ್ಷತ್ರಗಳ ಜಯಂತಿಯನ್ನು ಒಟ್ಟಿಗೆ ಆಚರ್ಸಿಸುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಈ ದೇಶದ ಮುಳುಗದ ಸೂರ್ಯನಾದ ಡಾ ಬಿ ಆರ್ ಅಂಬೇಡ್ಕರ್ ಮತ್ತು ಈ ದೇಶದ ಮುಳುಗದ ಚಂದ್ರನಾದ ಡಾ ಬಾಬು ಜಗಜಿತ್ ರಾಮವರು. ಒಬ್ಬರು ಈ ದೇಶದ ಹಣೆಬರವನ್ನೇ ಬರೆದ ಧೀಮಂತ ನಾಯಕರು ಮತ್ತೊಬ್ಬ ಈ ದೇಶದ ಸ್ವಾತಂತ್ರೋತ್ತರ ನಂತರ ಈ ದೇಶದ ಹಣೆಬರದಂತೆ ನಡೆದ ಮಹಾನ್ ನಾಯಕರು ಬಾಬೂಜಿಯವರು ಈ ದೇಶ ಕಿತ್ತು ತಿನ್ನುವ ಬಡತನ ಬಡತನ ನಿರುದ್ಯೋಗ ಬಳಲುತ್ತಿದ್ದ ದೇಶವನ್ನು ಮಹಾನ್ ರಾಷ್ಟ್ರಗಳ ಸಾಲಿಗೆ ತರಲು ಅವರ ಕೊಡುಗೆ ಅಪಾರವಾಗಿದೆ ಎಂದರು. ಮಾದಿಗ ಸಮಾಜವು ಶತಮಾನಗಳ ಕಾಲದಿಂದಲೂ, ಶೋಷಣೆ ದಬ್ಬಾಳಿಕೆಯಿಂದ ಮಲಗಿದೆ ಆದರೆ ಯಾರು ಮಾದಿಗರ ನ್ಯಾಯಯುತವಾದ ಬೇಡಿಕೆಯಾದ ಒಳ ಮೀಸಲಾತಿ ಪಡಿಸಲು ಉಪಲರಾಗಿದ್ದಾರೆ ಎಂದರು. ನಾವು ಯಾರ ಹಕ್ಕನ್ನು ಅನ್ನವನ್ನು ಕಿತ್ತುಕೊಳ್ಳುವರೆಲ್ಲ ನಮಗೆ ಬರಬೇಕಾದಂತ ಅನ್ನವನ್ನು ಮಾತ್ರ ಕೊಡಿ ಎಂದು ನಾವು ಕೇಳುತ್ತೇವೆ ಮಾದಿಗರ ಸೇನೆಯನ್ನು ಪರೀಕ್ಷಿಸಬೇಡಿ ಇಲ್ಲದಿದ್ದರೆ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಸಿದರು. ಮುಂದಿನ ತಿಂಗಳು ಜಾತಿ ಸಮೀಕ್ಷೆಯಲ್ಲಿ ಎಲ್ಲಾ ಮಾದಿಗರು ಯಾವುದೇ ಜಾತಿ ಉಪಜಾತಿಯನ್ನು ಬರಿಸದೆ ‘ಮಾದಿಗ’ ಎಂದು ನಮೂದಿಸಿ ಅದರ ಡೇಟಾ ಸಿಕ್ಕ ನಂತರ ನಮ್ಮ ಹೋರಾಟಕ್ಕೆ ಒಂದು ಅಂಕಿ ಅಂಶ ಸಿಗುತ್ತದೆ ಅದರ ನಂತರ ನಮ್ಮ ಸಂಘಟನೆ ವತಿಯಿಂದ ನ್ಯಾಯ ಸಿಗೋವರೆಗೂ ಹೋರಾಟ ನಿರಂತರ ಎಂದು ಹೇಳಿದರು.

ಕಾರ್ಯಕ್ರಮವ ದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾದಿಗ ಯುವ ಮುಖಂಡರಾದ ಸಾಯಬಣ್ಣ ಪುರದಾಳ ರವರು ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸರ್ಕಾರದ ಕ್ಯಾಬಿನೆಟಿನಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದಂತವರು ಸ್ವಾತಂತ್ರ್ಯ ನಂತರ ಕೃಷಿ ಸಚಿವರಾಗಿ ಬಡ ರೈತರ ಬಾಳಿಗೆ ಬೆಳಕಾಗಿ ಹಸಿರು ಕ್ರಾಂತಿಯನ್ನೇ ಮಾಡಿ ಈ ದೇಶಕ್ಕೆ ಆಹಾರ ಭದ್ರತೆಯನ್ನು ನೀಡಿದವರು ಎಂದರು. ಭಾರತದ ರಕ್ಷಣಾ ಸಚಿವರಾಗಿ ಗುರುತರ ವಾದಂತಹ ಸೇವೆಯನ್ನು ಸಲ್ಲಿಸಿ ಭಾರತ ದೇಶದ ಸೈನ್ಯವನ್ನು ಬಲಿಷ್ಠ ಗೊಳಿಸಿದವರು, ರಾಷ್ಟ್ರದ ಬೆನ್ನೆಲುಬು ರೈತ ಹಾಗೂ ಯೋಧ ಎರಡು ದೇಶದ ಬೆನ್ನೆಲುಬುಗಳಿಗೆ ಡಾ ಬಾಬು ಜಗಜೀವತ್ ರಾಮ್ ಅವರು ಮಾರ್ಗದರ್ಶನ ಮತ್ತು ನಾಯಕತ್ವ ಉಲ್ಲೇಖಾರವಾಗಿದೆ ಅವರ ಸಾಮಾಜಿಕ ಕಳಕಳಿ ಹಾಗೂ ರಾಜಕೀಯ ಮುನ್ನೋಟಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸಿದ್ದಬಸ್ವ ಕಬೀರ್ ಶ್ರೀಗಳು ಮಾತನಾಡಿ ಒಡೆದು ಆಳುವ ಮನೋಭಾವದ ಮನಸ್ಥಿತಿಗಳ ಮಧ್ಯೆ ಈ ಎರಡು ಮಹಾಪುರುಷರ ಜಯಂತಿಯನ್ನು ಒಟ್ಟಿಗೆ ಆಚರಿಸುತ್ತಿರುವುದು ಈ ನಾಡಿಗೆ ಒಂದು ಮೇಲುಕ್ತಿಯಾಗಿದೆ ಎಂದರು. ಡಾಕ್ಟರ್ ಬಾಬಾ ಸಾಹೇಬರ ಕೊಟ್ಟಂತ ಕೊಡುಗೆಯು ಈ ಶೋಷಿತ ಸಮುದಾಯಗಳು ಕೂಡಿಕೊಂಡು ಒಟ್ಟಿಗೆ ಬಾಳಬೇಕು ಎಡ ಬಲ ಸಮಬಲ ಎಂಬುವಂತೆ ಇಲ್ಲದಿದ್ದರೆ ನೀವು ಖಾಲಿ ಚಂಬುಗಳಾಗುತ್ತಿರಿ ಎಂದು ಎಚ್ಚರಿಸಿದರು. ಎರಡು ಸಮುದಾಯಗಳು ಅಣ್ಣ ತಮ್ಮಂದಿರಂತೆ ಬಾಳಬೇಕು ನೀವು ಹೊಡೆದು ಆಳುವವರ ಮಧ್ಯೆ ಅವರಿಗೆ ಸೂಕ್ತ ಉತ್ತರ ನೀಡಿದಂತಾಗುತ್ತದೆ. ನೀವು ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದೆ ಬರಬೇಕು ಎಂದರೆ ಮೊದಲು ನೀವು ಮಕ್ಕಳಿಗೆ ಶಿಕ್ಷಣವನ್ನು ಕೊಡಿ ಎಂದರು.

ಡಾ ಬಾಬೂಜಿ ಮತ್ತು ಡಾ ಬಾಬಾಸಾಹೇಬ್ ಅವರ ಭವ್ಯವಾದಂತ ಮೆರವಣಿಗೆಗೆ ಚಾಲನೆ ನೀಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಯಸ್ಮಿನ್ ಬಾನು ನಾಯ್ಕೋಡಿ ಮತ್ತು ರುದ್ರಣ್ಣ ಮಾನ ಶೆಟ್ಟಿಯವರು ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಯಸ್ಮಿನ್ ಬಾನು ನಾಯ್ಕೋಡಿ ಯವರು ಮಾದಿಗ ಸಮಾಜವು ಎಲ್ಲಾ ಜನಾಂಗದ ಜೊತೆ ಸೋದರತ್ತೆ ಸಭಾಳ್ವೆಯನ್ನು ನಡೆಸುವಂತಹ ಜನಾಂಗವಾಗಿದ್ದು ಬಸವ ತತ್ವದಂತೆ ಈ ಸಮಾಜವು ಶಾಂತ ಮತ್ತು ಮತ್ತು ಮುಗ್ಧ ಜನಾಂಗವಾಗಿದೆ ಎಂದರು ಈ ಸಮಾಜದ ಮೇಲೆ ಅಸ್ಪೃಶ್ಯತೆ ಸಮಾಜಕ್ಕೆ ಶೋಷಣೆ ಇನ್ನೂ ನಡೆಯುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಂದಗಿ ತಾಲೂಕಿನ ಜನಪ್ರಿಯ ಮಾಜಿ ಶಾಸಕರಾದ ರಮೇಶ್ ಬೂಸನೂರ್ ಅವರು ಈ ಸಮಾಜವು ಮುನ್ನಲೆಗೆ ಬರಲು ಈ ಸಮಾಜವು ಜಾಗೃತವಾಗಿರಬೇಕು ಸಾಮಾಜಿಕ ಶೈಕ್ಷಣಿಕವಾಗಿ ಜಾಗೃತರಾಗಿರಬೇಕು ಸರ್ಕಾರಿ ಸವಲತ್ತುಗಳ ಈ ಸಮಾಜಕ್ಕೆ ಇನ್ನೂ ತಲುಪಿಲ್ಲ ಎಂಬುದು ಜಗಜ್ಜಾಯಿರಾಥವಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಈ ಸಮಾಜದ ಏಳಿಗೆಗಾಗಿ ನಾನು ಪ್ರಮಾಣಿಕವಾಗಿ ಶ್ರಮಿಸಿದ್ದೇನೆ ಮುಂದೆ ಬರುವ ಅಧಿಕಾರ ಅವಧಿಯಲ್ಲಿ ಈ ಸಮಾಜಕ್ಕೆ ವಿಶೇಷವಾದಂತಹ ಕೊಡುಗೆಯನ್ನು ತಲುಪಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದರು.

ವೇದಿಕೆ ಮೇಲೆ ಸಂತೋಷ್ ಗೌಡ ಪಾಟೀಲ ಬಾಳ್ ತಾಲೂಕು ಬಿಜೆಪಿ ಅಧ್ಯಕ್ಷರು, ವಿಜುಗೌಡ ಬಿರಾದಾರ ಕಾಂಗ್ರೆಸ್ ಮುಖಂಡರು , ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ದಸ್ತಗಿರ್ ಸಾಬ್ ಮುಲ್ಲಾ, ಯಂಕನಗೌಡ ಪಾಟೀಲ್, ಶ್ರೀಶೈಲ್ ಶಳ್ಳಗಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಪ್ರಕಾಶ್ ಯಡ್ರಾಮಿ ಯುವ ಮುಖಂಡರು, ಬಸನಗೌಡ ಕುಂಟೋಜಿ ಊರಿನ ಪ್ರಮುಖರು, ಬಸವರಾಜ್ ಕಾಟಿ, ದಸ್ತಗಿರ್ ಅಗಸಿ ಮನಿ ಟಿಪ್ಪು ಸುಲ್ತಾನ್ ಅಧ್ಯಕ್ಷರು, ದೊಡ್ಡಪ್ಪ ಚಲವಾದಿ ಆದರ್ಶ ಶಿಕ್ಷಕರು, ರಾಜು ಶಿ ಕೆ ಮಾದಿಗ ಯುವ ಸೈನ್ಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಡಾ ನ್ಯಾಚುರದ್ದೀನ್ ನಾಯ್ಕೋಡಿ ಏಕನಾಥ್ ದ್ಯೋಶಲ್, ಯಲ್ಲು ಇಂಗಳಗಿ ಮಾದಿಗ ಯುವಸೇನೆ ತಾಲೂಕ್ ಅಧ್ಯಕ್ಷರು, ರಮೇಶ್ ಗುಬ್ಬೆವಾಡ ಎಸ್ ಸಿ ಘಟಕದ ಅಧ್ಯಕ್ಷರು ವಿಜಯಪುರ, ರಾಜು ಗುಬ್ಬೇವಾಡ ಎ ಆಯ್ ಬಿ ಎಸ್ ಪಿ ಜಿಲ್ಲಾಧ್ಯಕ್ಷರು, ಸಿದ್ದು ಪೂಜಾರಿ ಪಿಡಬ್ಲ್ಯೂಡಿ ಗುತ್ತಿಗೆದಾರರು, ರವಿ ಮೂಲಿಮನಿ ಕಾಂಗ್ರೆಸ್ ಮುಖಂಡರು, ನಿತ್ಯಾನಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಗುಬ್ಬೆವಾಡ್, ಖಾಜು ಬಂಕಲಗಿ ಬಿಜೆಪಿ ಮುಖಂಡರು, ಶಿವು ದೇವಟಗಿ ಕಾಂಗ್ರೆಸ್ ಮುಖಂಡರು ಮುಂತಾದವರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಜಟ್ಟೆಪ್ಪ ದೊಡ್ಡಮನಿ ಶಿಕ್ಷಕರು, ದೇವಿಂದ್ರ ರತ್ಯಾಳ ಯುವ ಮುಖಂಡರು, ಯಮನಪ್ಪ ದೊಡ್ಡಮನಿ, ಬಸವರಾಜ್ ರತ್ಯಾಳ, ಮಂಜುನಾಥ್ ಕರವಿನಾಳ, ಮಂಜುನಾಥ ಗುಂಡಾಪುರ್, ವಿಜಯಕುಮಾರ ಹುಣಶ್ಯಾಳ, ಶಿವಪುತ್ರ ದೊಡ್ಡಮನಿ, ಶರಣಪ್ಪ ದೊಡ್ಮನಿ, ಅನೇಕ ಸಮಾಜದ ಯುವ ಮುಖಂಡರು ಮತ್ತು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಸಾಯಬಣ್ಣ ಮಾದರ 

WhatsApp Group Join Now
Telegram Group Join Now
Share This Article
error: Content is protected !!