ಬೀದರ್: ಸೆಪ್ಟೆಂಬರ್ ೨೫ರಿಂದ ಡಿಸೆಂಬರ್ ೨೫ರ ವರೆಗೆ ಆತ್ಮ ನಿರ್ಭರ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಮುಖ್ಯಸ್ಥರು ಹಾಗೂ ಬೂಡಾದ ಮಾಜಿ ಅಧ್ಯಕ್ಷ ಬಾಬುವಾಲಿ ತಿಳಿಸಿದರು.
ಸೋಮವಾರ ಮಧ್ಯಾಹ್ನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ಅಭಿಯಾನದ ಪ್ರಯುಕ್ತ ಅನೇಕ ವಿಚಾರ ಸಂಕಿರಣಗಳು, ರಥಯಾತ್ರೆ, ದೆಶಿ ವಸ್ತುಗಳ ಬಳಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈಗ ದೀಪಾವಳಿ ಆಗಮಿಸುತ್ತಿದ್ದು, ಎಲ್ಲರು ದೇಶಿ ವಸ್ತುಗಳು ಬಳಿಕೆ ಮಾಡುವ ಮೂಲಕ ಸ್ವದೇಶಿ ಅಭಿಯಾನಕ್ಕೆ ಕೈಜೋಡಿಸಬೇಕು. ಸ್ವದೇಶಿ ಪಟಾಕಿಗಳು ಶಬ್ದ ಮಾಲಿನ್ಯವಾಗದ ರೀತಿಯಲ್ಲಿ ಬಳಿಕೆ ಮಾಡಬೇಕೆಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಔರಾದ್ ಶಾಸಕ ಪ್ರಭು ಚವ್ಹಾಣ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಗುರುನಾಥ ಜಕ್ಯಾಂತಿಕರ್, ಕಿರಣ ಪಾಟೀಲ, ಬಸವರಾಜ ಪವಾರ, ಶ್ರೀನಿವಶ ಚೌದ್ರಿ, ಗುರುನಾಥ ರಾಜಗಿರಾ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
ವರದಿ:ಸಂತೋಷ ಬಿಜಿ ಪಾಟೀಲ




