ಬಾದಾಮಿ : ಇತ್ತೀಚಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಕಳ್ಳತನ ಮಾಡುವ ಆರೋಪಿಗಳ ಪತ್ತೆ ಹಚ್ಚುವಲ್ಲಿ ಬಾಗಲಕೋಟೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿ ಹಾಗೂ ಕೆ. ಎಸ್ ಪಿ. ಎಸ್. ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಶ್ವನಾಥ ಕುಲಕರ್ಣಿ ಬಾದಾಮಿ ಸಿ. ಪಿ. ಐ. ಕರಿಯಪ್ಪ ಬನ್ನೆ, ಬಾದಾಮಿ ಪಿ ಎಸ್. ಐ. ವಿಠಲ್ ನಾಯಿಕ್, ಕ್ರೈಮ್ ಪಿ. ಎಸ್. ಐ. ವಿಜಯಕುಮಾರ ರಾಟೋಡ, ಪೊಲೀಸ್ ಸಿಬ್ಬಂದಿಗಳಾದ ಎ. ಎಸ್. ಚವ್ಹಾಣ, ಎಸ್. ಬಿ. ಮುತ್ತಲಗೇರಿ, ಬಿ. ಎ. ವಾಲೀಕಾರ, ಎಲ್. ಎಂ. ತೋಳಮಟ್ಟಿ, ಆರ್. ಸಿ. ಈಳಗೇರ, ಎಂ. ಎಚ್. ಮುಲ್ಲಾ, ಮಹಾಂತೇಶ್ ಹರದೊಳ್ಳಿ ಸೇರಿ ಕಾರ್ಯಚರಣೆ ನಡೆಸಿ ಸಂಶಯಾಸ್ಪದವಾಗಿ ಒದ್ದಾಡುತ್ತಿದ್ದ ವ್ಯಕ್ತಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬೀಜಕಲ್ಲ ಮೂಲದ ಮಂಜುನಾಥ ಹಿರೇಯಮನೂರಪ್ಪ. ವಡ್ಡರ ಎಂಬಾತನನ್ನು ಬಂಧಿಸಿ ಹಿಡಿಯುವಲ್ಲಿ ಬಾದಾಮಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1,40,000 ಒಂದು ಲಕ್ಷ ನಲವತ್ತು ಸಾವಿರ ಕಿಮ್ಮತ್ತಿನ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಾದಾಮಿ ಪೋಲೀಸರ ಕಾರ್ಯಚರಣೆಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮೇಲಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ:- ರಾಜೇಶ್.ಎಸ್. ದೇಸಾಯಿ