ಬಾದಾಮಿ : ಅವ್ಯವಸ್ಥೆಯ ಆಗರ ಬಾದಾಮಿ ತಾಲೂಕ ಆಸ್ಪತ್ರೆ, ಅವ್ಯವಸ್ಥೆಯ ಆಗರಕ್ಕೆ ಬೇಸತ್ತು ಹೋದ ರೋಗಿಗಳು, ರಬ್ಬರ್ ಸ್ಟ್ಯಾಂಪ್ ಆದ ಮುಖ್ಯ ವೈದ್ಯಧಿಕಾರಿ.
ಬಾದಾಮಿ ತಾಲೂಕಾ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬೇಸತ್ತಿರುವ ರೋಗಿಗಳು. ಮುಖ್ಯವಾಗಿ ಇಲ್ಲಿ ತುರ್ತುಚಿಕಿತ್ಸಾ ವಿಭಾಗದಲ್ಲಿ ಜನರೇಟರ್ ವ್ಯವಸ್ಥೆ ಇಲ್ಲದೇ ಯು. ಪಿ. ಎಸ್. ಮೇಲೆಯೇ ಇಮೇರ್ಜೆನ್ಸಿ ವಾರ್ಡ್ ನಡಸ್ತಾ ಇರೋದು ನಿಮಗೆ ಕಾಣಸಿಗುತ್ತದೆ. ಇಲ್ಲಿ ಕುಡಿಯುವ ನೀರಿನ ಜಾಗ ಮತ್ತು ಶೌಚಾಲಯಗಳು ಸ್ವಚ್ಚತೆ ಇಲ್ಲದೇ ವಾಸನೆಭರಿತವಾಗಿವೆ.
ಇಲ್ಲಿ ಮುಖ್ಯ ವೈದ್ಯಧಿಕಾರಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತೆ ಆಗಿದೆ ಇಲ್ಲೇನಿದ್ದರೂ ಬಾದಾಮಿ ಶಾಸಕರ ಆಪ್ತರ ಉಸ್ತುವಾರಿ ನಡೆಸುತ್ತಾರೆ ಎನ್ನುವುದು ಇಲ್ಲಿನ ಸಾಮಾಜಿಕ ಹೋರಾಟಗಾರರು ಮಾಧ್ಯಮದ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಬಾರಿ ಬೆಲೆಯ ಬ್ಯಾಟರಿಗಳು ಸರಕಾರಿ ತಾಲೂಕಾ ಆಸ್ಪತ್ರೆಯಿಂದಲೇ ವೈದ್ಯಧಿಕಾರಿಗಳ ಗಮನಕ್ಕೆ ಬಾರದೇ ಶಾಸಕರ ಆಪ್ತರ ಸಮ್ಮುಖದಲ್ಲಿ ಬ್ಯಾಟರಿ ರವಾನೆಯಗಿರುವುದು ಇದಕ್ಕೆ ಉತ್ತಮ ಉದಾಹರಣೆ, ಇನ್ನು ಮಾಧ್ಯಮದವರು ಪತ್ರಕರ್ತರು ಸುದ್ದಿ ಬಿತ್ತರ ಪ್ರಸಾರ ಮಾಡಿದರು ನಮ್ಮದೇ ಸರಕಾರ ಇದೆ ಏನು ಮಾಡಿಕೊಳ್ಳೋಕೆ ಆಗಲ್ಲ ಎನ್ನುವ ಉದ್ದಟತನದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ವರದಿ:- ರಾಜೇಶ್. ಎಸ್. ದೇಸಾಯಿ




