
ಭಾರತ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೋರಿಯಾದ ಎನ್ ಸೆ ಯಂಗ್ ಎದುರು ಮತ್ತೇ ಪರಾಭವಗೊಂಡರು.
ಭಾರತದ ಖ್ಯಾತ ಆಟಗಾರ್ತಿಗೆ ಸೆ ಯಂಗ್ ಎದುರು ಇದು ಸತತ 8 ನೇ ಸೋಲಾಗಿದ್ದು, ಈ ವರೆಗೆ ಒಂದೇ ಒಂದು ಪಂದ್ಯವನ್ನು ಸಿಂಧು ಸೆ ಯಂಗ್ ಎದರು ಗೆದ್ದಿಲ್ಲ. ನಿನ್ನೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ನೇರ ಸೆಟ್ ಗಲ್ಲಿ ಸೋಲನುಭವಿಸಿದರು.




