Ad imageAd image

ಶಾಸಕ ಗಣೇಶ ಹುಕ್ಕೇರಿಯವ ಜನ್ಮದಿನದ ಸಂಭ್ರಮ ಹಿನ್ನೆಲೆ: ಸರ್ಕಾರಿ ಪದವಿ ಪೂರ್ವ 1200 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Bharath Vaibhav
ಶಾಸಕ ಗಣೇಶ ಹುಕ್ಕೇರಿಯವ ಜನ್ಮದಿನದ ಸಂಭ್ರಮ ಹಿನ್ನೆಲೆ: ಸರ್ಕಾರಿ ಪದವಿ ಪೂರ್ವ 1200 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ
WhatsApp Group Join Now
Telegram Group Join Now

ಚಿಕ್ಕೋಡಿ:– ಶಾಸಕ ಗಣೇಶ ಹುಕ್ಕೇರಿಯವರಿಗೆ ‌46 ನೇ ಜನ್ಮಹಿನ್ನಲೆಯಲ್ಲಿ ಚಿಕ್ಕೋಡಿ-ಸದಲಗಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಲಾಯಿತು.

ಚಿಕ್ಕೋಡಿ ಪಟ್ಟಣದ ಪರಟಿನಾಗಲಿಂಗೇಶ್ವರ ಸಭಾಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬ್ಯಾಗ್ ವಿತರಣೆಯನ್ನು ಮಾಡಲಾಯಿತು. ಇದೇ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ ಪಾಟೀಲ ಮಾತನಾಡಿ ವಿಧಾನಪರಿಷತ್ ಪ್ರಕಾಶ ಹುಕ್ಕೇರಿಯವರ ಮಾರ್ಗದರ್ಶನದಲ್ಲಿ ಶಾಸಕ ಗಣೇಶ ಹುಕ್ಕೇರಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.ಕ್ಷೇತ್ರದ ಜನರ ನಾಡಿಮಿಡಿತ ಅರಿತು ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಪುರಸಭೆ ಸದಸ್ಯ ರಾಮಾ ಮಾನೆ ಮಾತನಾಡಿ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಸದಾಕಾಲವೂ ಜನರ ಸಮಸ್ಯೆಗಳಿಗೆ ಸ್ಫಂದಿಸುವ ಕೆಲಸ ಮಾಡುತ್ತಿದ್ದಾರೆ.ತಮ್ಮ ಅಭಿವೃದ್ಧಿ ಕಾರ್ಯ ಮೂಲಕ ಜನಮನದಲ್ಲಿ ಶಾಸಕ ಗಣೇಶ ಹುಕ್ಕೇರಿ ಹೆಸರು ಮಾಡಿದ್ದಾರೆ ಎಂದರು.ಇವತ್ತು ಸರ್ಕಾರಿ ಪದವಿ ಪೂರ್ವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗಣೇಶ ಹುಕ್ಕೇರಿ ಅಭಿಮಾನಿ ಬಳಗದಿಂದ ಬ್ಯಾಗ್ ವಿತರಿಸುವ ಕಾರ್ಯ ಪ್ರಶಂಸನೀಯ ಎಂದರು.

ಈ ಸಂಧರ್ಭದಲ್ಲಿ ಗಣಪಾ ಧನವಡೆ,ಬಾಳಾಸಾಹೇಬ ಪಾಟೀಲ, ಪುಂಡಲಿಕ ಖೋತ,ರಾಜೇಂದ್ರ ಕರಾಳೆ,ಅನೀಲ ಮಾನೆ,ಪಾಂಡುರಂಗ ಮಾನೆ,ಪೋಪಟ ಸಪ್ತಸಾಗರೆ,ಈರ್ಫಾನ ಬೇಪಾರಿ,ಪರಶುರಾಮ ಕಾಳೆ,ಸುರೇಶ ಚೌಗಲಾ,ವರ್ಧಮಾನೆ ಸದಲಗೆ,ಚಂದ್ರಕಾಂತ ಹುಕ್ಕೇರಿ, ನರೇಂದ್ರ ನೇರ್ಲಿಕರ,ಸುರೇಶ ಕಾಗವಾಡೆ,ಅನೀಲ ವಾಳಕೆ,ಶಿವು ಹಂಜಿ,ರವಿ ಮಾಳಿ,ಶ್ಯಾಮ ರೇವಡೆ,ಪಾಂಡು ಕೋಳಿ,ಪೋಪಟ ನರವಾಡೆ,ರವಿ ಹಂಪನ್ನವರ,ಪ್ರಭಾಕರ ಕೋರೆ,ಉಮೇಶ ಸಾತ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!