Ad imageAd image

ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಹಳೇ ಹುಲಿ ಪಿ ಸಿ ಗದ್ದಿಗೌಡ್ರ ಪರ ಭರ್ಜರಿ ಮಾತಾಯಾಚನೆ.

Bharath Vaibhav
ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಹಳೇ ಹುಲಿ ಪಿ ಸಿ ಗದ್ದಿಗೌಡ್ರ ಪರ ಭರ್ಜರಿ ಮಾತಾಯಾಚನೆ.
WhatsApp Group Join Now
Telegram Group Join Now

ಬಾದಾಮಿ:- ಲೋಕಸಭಾ ಚುನಾವಣೆಯ ಕೋಟೆ ನಗರಿ ಬಾಗಲಕೋಟೆ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಳೇ ಹುಲಿ ಎಂದೇ ಕರೆಯುವ ಪಿ ಸಿ ಗದ್ದಿಗೌಡ್ರ ಪರ ಇಂದು ಬಾದಾಮಿ ಮತಕ್ಷೇತ್ರದ ಗ್ರಾಮಗಳಾದ ಆಸಂಗಿ, ಕಟಗಿನಹಳ್ಳಿ, ಕೊಟ್ಟನಳ್ಳಿ, ಲಾಯದಗುಂದಿ, ಸೇರಿದಂತೆ ಮೈತ್ರಿ ಪಕ್ಷ ಜೆ ಡಿ ಎಸ್ ಜೊತೆಗೂಡಿ ಭರ್ಜರಿ ಮಾತಾಯಾಚನೆ ಮಾಡಲಾಯಿತು.

ಪ್ರಚಾರ ಕಾರ್ಯದಲ್ಲಿ ಸಂದರ್ಭದಲ್ಲಿ ಜೆ ಡಿ ಎಸ್ ಪಕ್ಷದ ಬಾಗಲಕೋಟ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ,ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ,ಬಿ ಜೆ ಪಿ ಜಿಲ್ಲಾಧ್ಯಕ್ಷ ಶಾಂತಗೌಡ. ಟಿ. ಪಾಟೀಲ,ಯುವ ಮುಖಂಡ ಮಹಾಂತೇಶ್ ಮಮದಾಪೂರ, ಮಾಜಿ ಕೃಷ್ಣಾ ಕಾಡಾ ಅಧ್ಯಕ್ಷರಾದ ಬಿ. ಪಿ. ಹಳ್ಳೂರ, ಕುಮಾರಗೌಡ ಜನಾಲಿ, ತಾಲೂಕಾ ಮಂಡಲ ಅಧ್ಯಕ್ಷ ನಾಗರಾಜ್ ಕಾಚಟ್ಟಿ, ಎಫ್. ಆರ್. ಪಾಟೀಲ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಪದಾಧಿಕಾರಿಗಳು ಹಾಗೂ ಊರಿನ ಗುರುಹಿರಿಯರು ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!