Ad imageAd image

ಕಾಂಗ್ರೆಸ್ ನ ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರ ಅಭ್ಯರ್ಥಿ ಯುವನಾಯಕಿ ಸಂಯುಕ್ತ ಪಾಟೀಲ ಭರ್ಜರಿ ಪ್ರಚಾರ.

Bharath Vaibhav
ಕಾಂಗ್ರೆಸ್ ನ ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರ ಅಭ್ಯರ್ಥಿ ಯುವನಾಯಕಿ ಸಂಯುಕ್ತ ಪಾಟೀಲ ಭರ್ಜರಿ ಪ್ರಚಾರ.
WhatsApp Group Join Now
Telegram Group Join Now

ಬಾಗಲಕೋಟೆ:-ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಯುವನಾಯಕಿ ಶ್ರೀಮತಿ #ಸಂಯುಕ್ತ_ಪಾಟೀಲ ಇವರ ಪರವಾಗಿ ಶಾಸಕರಾದ ಶ್ರೀ #ಎಚ್_ವೈ_ಮೇಟಿಯವರ ನಂದೇಶ್ವರ ನಗರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.

ನಂತರ ಶ್ರೀಮತಿ ಸಂಯುಕ್ತ ಪಾಟೀಲರವರು ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ರಾಂಪುರ ಮತ್ತು ಸುತಗುಂಡಾರ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.
ಶ್ರೀಮತಿ ಸಂಯುಕ್ತಾಪಾಟೀಲ ಹೋದಕಡೆಯಲ್ಲೆಲ್ಲ ಅದ್ದೂರಿ ಸ್ವಾಗತ ಸಿಗುತ್ತಿರುವುದು ಕೋಟೆ ನಗರಿ ಚುನಾವಣಾ ಅಖಾಡ ರಂಗೇರಲು ಕಾರಣವಾಗಿದೆ.

ಗೆಲುವಿನ ಕಿರೀಟವನ್ನೇ ಧರಿಸುತ್ತಾ ಬಂದಿರುವ ಕೋಟೆ ನಗರಿ ಮತಕ್ಷೇತ್ರದ ಹಳೇ ಹುಲಿ ಪಿ ಸಿ ಗದ್ದಿಗೌಡರಿಗೆ ಯುವನಾಯಕಿ ತಮ್ಮ ಚಾಲೆಂಜಿಂಗ್ ಭಾಷಣದ ಅಬ್ಬರದ ಪ್ರಚಾರದ ಮೂಲಕ ಘರ್ಜನೆ ನೀಡುತ್ತಿರುವ ಸಂಯುಕ್ತಾ ಪಾಟೀಲ ಕೋಟೆ ನಗರಿ ರಾಜಕಾರಣವನ್ನು ಮತ್ತಷ್ಟು ರಂಗೇರಿಸಿದ್ದಾರೆ ಎನ್ನಬಹುದು.

ಕುತೂಹಲ ಕೆರಳಿಸಿದೆ ಕೋಟೆ ನಗರಿ ರಾಜಕಾರಣ ಎನ್ನಬಹುದು.ಪ್ರಚಾರದಲ್ಲಿ ಶಾಸಕರಾದ ಎಚ್. ವಾಯ್. ಮೇಟಿ,,ಮಹಿಳಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ರಕ್ಷಿತಾ ಈಟಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ನಾಗರಾಜ್ ಹದಲಿ, ಚನ್ನವೀರ ಅಂಗಡಿ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಯಾದವಾಡ, ರಜಾಕ್ ಬೇನೂರ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!