ಬಾಗೇಪಲ್ಲಿ : ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸದಾಶಿವ ರೆಡ್ಡಿಯವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಬಾಗೇಪಲ್ಲಿ ವಕೀಲರ ಸಂಘ ಮೌನ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹಿರಿಯ ವಕೀಲ ಅಪ್ಪು ಸ್ವಾಮಿ ತಿಳಿಸಿದರು.
ಇಂದು ನ್ಯಾಯಲಯದ ಮುಂಭಾಗ ಬಾಗೇಪಲ್ಲಿ ವಕೀಲರು ಕೋರ್ಟ್ ಕಲಾಪಗಳನ್ನ ಹೊರಗುಳಿದು ನಾವು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಭಾರತೀಯ ವಕೀಲ ಪರಿಷತ್ತಿನ ಕೋ ಚೇರ್ಮೆನ್ ಹಾಗೂ ಹಿರಿಯ ವಕೀಲರಾದಂತಹ ಶ್ರೀಯುತ ವೈಆರ್ ಸದಾಶಿವ ರೆಡ್ಡಿ ಅವರ ಮೇಲೆ ಮಾರಣಾಂತಿಕ ಅಲೆಯನ್ನು ಖಂಡಿಸಿ ಈ ದಿನ ನಾವು ತಿಳಿಸಿದರು.
ಪ್ರತಿಭಟನೆಗೆ ರಾಜ್ಯದ್ಯಂತ 199 ವಕೀಲರ ಸಂಘಟನೆಗಳು ಬೆಂಬಲ ಸೂಚಿಸಿದ್ದು, ರಾಜ್ಯಾದ್ಯಂತ ಎಲ್ಲಾ ವಕೀಲರು ಬಲಗೈಗೆ ಕೆಂಪು ಪಟ್ಟಿ ಧರಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ಅದೇ ಬಾಗೇಪಲ್ಲಿ ವಕೀಲರ ಸಂಘ ಸಹ ಕೋರ್ಟ್ ಕಲಾಪ ಇಂದು ಹೊರಗುಳಿದು ನಾವು ಸಹ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಆರೋಪಿಗಳು: ಕೇಸು ಕೊಡುವ ನೆಪದಲ್ಲಿ ಏ.16ರಂದು ಅವರ ಕಚೇರಿಗೆ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬ ಫೈಬರ್ ಪೈಪಿನಿಂದ ಹೊಡೆದು ಗಾಯಗೊಳಿಸಿದ್ದಾನೆ.
ಇನ್ನೊಬ್ಬ ಹೊಡೆಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಇವರಿಬ್ಬರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು.
ದಾಳಿ ನಡೆಸಿದ ದುರುಳರಿಗೂ ಸದಾಶಿವ ರೆಡ್ಡಿಯವರ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತ್ವರಿತವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜೆಎನ್ ಮಂಜುನಾಥ್ , ವಕೀಲರ ಸಂಘದ ಕಾರ್ಯದರ್ಶಿ ಜಯಪ್ಪ, ಹಿರಿಯ ವಕೀಲರಾದ ಕರುಣಸಾಗರ ರೆಡ್ಡಿ, ಬಿಎ ನರಸಿಂಹಮೂರ್ತಿ, ಮುಸ್ತಾಕ್ ಅಹಮದ್, ವಿ ನಾರಾಯಣ ,ವೆಂಕಟನಾರಾಯಣ ,ನಟರಾಜ್ ,ಕೆಎನ್ ರವಿಕುಮಾರ್ ,ಅರುಣ ,ಬಾಬು, ನಾಗಭೂಷಣ ,ಶಿವ ,ಮಲ್ಲಿಕಾರ್ಜುನ, ಸತೀಶ ಎಂಆರ್ ಮಂಜುನಾಥ್ ವೆಂಕಟರಮಣ ,ಶ್ರೀನಾಥ್, ಅನಿಲ್ ,ಕಲೀಮುಲ್ಲಾ, ವಕೀಲರು ಹಾಜರ್ ಇದ್ದರು.
ವರದಿ :ಯಾರಬ್. ಎಂ.