Ad imageAd image

ಶ್ರೀ ದತ್ತ ಇಂಡಿಯಾ ಪ್ರೈ.ಲಿ,ಹಾವಿನಾಳ ಕಾರ್ಖಾನೆಯ ಬೈಲರ್ ಅಗ್ನಿ

Bharath Vaibhav
ಶ್ರೀ ದತ್ತ ಇಂಡಿಯಾ ಪ್ರೈ.ಲಿ,ಹಾವಿನಾಳ ಕಾರ್ಖಾನೆಯ ಬೈಲರ್ ಅಗ್ನಿ
WhatsApp Group Join Now
Telegram Group Join Now

ಚಡಚಣ:-ಶ್ರೀ ದತ್ತ ಇಂಡಿಯಾ ಪ್ರೈ.ಲಿ,ಹಾವಿನಾಳ
ಕಾರ್ಖಾನೆಯ ಬೈಲರ್ ಅಗ್ನಿ ಪ್ರದೀಪನ ಪುಜೆ ಮುಕ್ತಾಯ
5.50 ಲಕ್ಷ ಮೆ.ಟನ್‌ ಕಬ್ಬು ನುರಿಸುವ ಉದ್ದೇಶ -ಮೃತ್ಯುಂಜಯ ಶಿಂದೆ

ದಿನಾಂಕ 16/10/2024 ರಂದು ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾವಿನಾಳ ಕಾರ್ಖಾನೆಯ 2024-25 ನೇ ಸಾಲಿನ ಬೈಲರ್ ಅಗ್ನಿ ಪ್ರದೀಪನ ಕಾರ್ಯಕ್ರಮವು ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ ಫಳಟನ್‌ದ ಅಧ್ಯಕ್ಷರಾದ ಮಹಂತ್ ಶ್ರೀ ಪ.ಪೂ ವಿದ್ವಾಂಶ ಶ್ಯಾಮಸುಂದರ್ ಶಾಸ್ತ್ರಿ ಮಹಾರಾಜರ ಅಮೃತ ಹಸ್ತದಿಂದ ಕಾರ್ಯಕ್ರಮವು ಮುಕ್ತಾಯ ಮಾಡಲಾಯಿತು. ಈ ವೇಳೆಯಲ್ಲಿ ಕಂಪನಿಯ ಸಂಚಾಲಕರಾದ ಮಾನ್ಯ ಕರಣ್ ರೂಪಾರೇಲ್, ಮಾನ್ಯ ಚೇತನ ಧಾರು ರಾಜ್ಯ ಶಿಕರ್ ಬ್ಯಾಂಕಿನ ಸಂಚಾಲಕ ಅವಿನಾಶ್ ಮಹಾಗವಕರ್, ಕಂಪನಿಯ ಉಪಾಧ್ಯಕ್ಷರಾದ ಮಾನ್ಯ ಮೃತ್ಯುಂಜಯ ಶಿಂದೆ, ಯುನಿಟ್ ಹೆಡ್ ಮಾನ್ಯ ಶ್ರೀ ವ್ಹಿ. ಸುಬ್ಬುರತ್ನಮ್‌ ಮತ್ತು ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಾಕ್ರಮ ನೆರವೇರಿಸಲಾಯಿತು. ಸದರಿ ಬಾಯಿಲರ್ ಪೂಜೆ ಮಾನ್ಯ ಕಾರ್ಖಾನೆಯ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ರೋಹಿತ್ ಪಾಟೀಲ ಮತ್ತು ಬೈಲರ್ ಸಿಬ್ಬಂದಿ ಶ್ರೀ ಉಮೇಶ್ ಮಾವಿನಮರ ಅವರ ಸಹಪತ್ನಿಯ ಅವರಿಗೆ ಮಾನ ಕೊಡಲಾಯಿತು.


ಕಂಪನಿಯ ಉಪಾಧ್ಯಕ್ಷರಾದ ಮಾನ್ಯ ಮೃತ್ಯುಂಜಯ ಶಿಂದೆ ಯವರು ಕಾರ್ಖಾನೆಯ ಕಬ್ಬು ನುರಿಸುವಿಕೆಯನ್ನು ನವೆಂಬರ್ 15ನೇ ತಾರೀಖು ನಷ್ಟರಲ್ಲಿ ಪ್ರಾರಂಭಿಸಲಾಗುವುದೆಂದು ಹೇಳಿದರು ಮತ್ತು ಕಬ್ಬುನುರಿಸುವ ಉದ್ದಿಷ್ಟ 5.50 ಲಕ್ಷ ಮೆ.ಟನ್‌ ಮಾಡುವ ಸಲುವಾಗಿ ಕಬ್ಬಿನ ನೋಂದಣಿ, ಬೇಕಾಗುವ ಕಟಾವು ಸಾಗಾಣಿಕೆಗೆ ಯಂತ್ರಣ ತುಂಬಲಾಗಿದೆ ಮತ್ತು ಕಾರ್ಖಾನೆಯ ಮಶಿನರಿ ದುರಸ್ತಿ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಆದ್ದರಿಂದ ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿಯ ರೈತರ ತಮ್ಮ ಎಲ್ಲಾ ಕಬ್ಬು ಕಾರ್ಖಾನೆಗೆ ನುರಿಸಲು ಕಳಿಸುವಂತೆ ಆಹ್ವಾನ ಮಾಡಿದರು. ಅದರಂತೆ ಕಬ್ಬು ಬೆಳೆಗಾರರು, ಕಟಾವು ಸಾಗಾಣಿಕೆದಾರರಿಗೆ, ವ್ಯಾಪಾರಿಗಳಿಗೆ ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು ತಿಳಿಸಿದರು .

ಕಬ್ಬು ವಿಭಾಗದ ಅಧಿಕಾರಿಗಳಿಗೆ ಲಕ್ಷ್ಮಿ ಮಂದಿರದಿಂದ ಪೂಜೆ ಮಾಡಿ ದೀಪವನ್ನು ಬೆಳಗಿಸಿ ಲಕ್ಷ್ಮಿ ಮಂದಿರದಿಂದ ಸಕ್ಕರೆ ಕಾರ್ಖಾನೆ ವರಿಗೆ ಜ್ಯೋತಿಯನ್ನು ತಂದು ಬೈಲರ್ ಪ್ರದೀಪನ್ ಪೂಜೆಯ ಹೋಮದಲ್ಲಿ ಈ ಜ್ಯೋತಿಯನ್ನು ಬೆಳಗಿಸಿ ಬೈಲರ್ ಪ್ರದೀಪನ ಪೂಜೆಯನ್ನು ಕಬು ವಿಭಾಗದ ಕೇನ್ ಮ್ಯಾನೇಜರ್ ಅನಿರುದ್ಧ ಪಾಟೀಲ್, ಮತ್ತು ಕೃಷಿ ಅಧಿಕಾರಿ ರವೀಂದ್ರ ಬಿರಾದಾರ, ಮತ್ತು ಕಬ್ಬ ವಿಭಾಗದ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ವರ್ಗ ದವರು ಜ್ಯೋತಿಯನ್ನು ಬೆಳಗಿಸಿ ಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಿದರು

ಎಲ್ಲಾ ಕಟಾವು ಸಾಗಣಿಕೆದಾರರಿಗೆ ಹಿಂದಿನ ವರ್ಷದ 34% ಕಟಾವಿನ ಹೆಚ್ಚುವಾರಿ (ಫರಾಖ) ಹಣವು ಕಾರ್ಖಾನೆ ಪ್ರಾರಂಭದ ನಂತರ ಎರಡು ಕಂತಿನಲ್ಲಿ ಕೊಡಲು ನಿರ್ಧರಿಸಲಾಗಿದೆ. ಈ ವರ್ಷದಲ್ಲಿ ನುರಿಸಲು ಬರುವ ಕಬ್ಬಿಗೆ 15 ದಿವಸದಲ್ಲಿ ಬಿಲ್ಲನ್ನು ಸರಿಯಾದ ವೇಳೆಗೆ ಕೊಡಲಾಗುವುದು ಎಂದು ಹೇಳಿದರು.

ಈ ವೇಳೆಯಲ್ಲಿ ಸರ್ವ ಶ್ರೀ ಸೂರಜ್ ಬಾಂದಲ, ರವೀಂದ್ರ ಗಾಯಕ್ವಾಡ, ಹೇಮಂತ್ ಮುದಲಿಯಾರ, ಸಿದ್ದರಾಮ್ ಘಾಣಲೆ ಮತ್ತು ಎ.ಜಿ.ಎಂ(ಉತ್ಪಾದನೆ) ಶ್ರೀಕಾಂತ್ ಕುಂಭಾರ, ಕೇನ್ ಮ್ಯಾನೇಜರ್ ಅನಿರುದ್ಧ ಪಾಟೀಲ್, ಕೃಷಿ ಅಧಿಕಾರಿ ರವೀಂದ್ರ ಬಿರಾಜದಾರ್ ಎಲ್ಲಾ ವಿಭಾಗದ ಸಿಬ್ಬಂದಿ ಮತ್ತು ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.

ವರದಿ :-ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!