Ad imageAd image

ಮುಸ್ಲೀಂ ಬಾಂಧವರಿಂದ ಶ್ರದ್ಧೆ, ಭಕ್ತಿಯಿಂದ ಬಕ್ರೀದ್ ಆಚರಣೆ

Bharath Vaibhav
ಮುಸ್ಲೀಂ ಬಾಂಧವರಿಂದ ಶ್ರದ್ಧೆ, ಭಕ್ತಿಯಿಂದ ಬಕ್ರೀದ್ ಆಚರಣೆ
WhatsApp Group Join Now
Telegram Group Join Now

ಬಸವನ ಬಾಗೇವಾಡಿ: ರಾಜ್ಯಾದ್ಯಂತ ಇಂದು ತ್ಯಾಗ ಬಲಿದಾನಗಳ ಸಂಕೇತವಾದ ಭಕ್ರೀದ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೇ ರೀತಿ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕುದುರೆಸಾಲೊಡಿಗಿ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧೆ ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಮುಂಜಾನೆ ಗ್ರಾಮದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರವೇರಿದ್ದರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳ ಹಬ್ಬ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ವಿಶೇಷವಾಗಿ ಪ್ರಾರ್ಥನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ನಮಾಜ್ ಮಾಡಿದರು.


ಬಳಿಕ ಎಲ್ಲ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಯ ಮಾಡಿಕೊಂಡರು.
ಬಕ್ರಿದ್ ಹಬ್ಬದ ವಿಶೇಷತೆ ಏನೆಂದರೆ ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರನನ್ನು ದೇವರಿಗೆ ಅರ್ಪಣೆ ಮಾಡಲು ಮುಂದಾದಾಗ ಮೊಹಮ್ಮದ್ ಪೈಗಂಬರರು ಇಬ್ರಾಹಿಂ ಪುತ್ರನನ್ನು ಬಲಿ ನೀಡದೆ ಕುರಿಯನ್ನು ಅರ್ಪಣೆ ಮಾಡುವಂತೆ ಹೇಳುತ್ತಾರೆ. ಆಗ ಕುರಿಯನ್ನು ಅರ್ಪಿಸಲಾಗುತ್ತದೆ. ಅಂದಿನಿಂದ ಬಕ್ರಿದ್ ಹಬ್ಬವನ್ನು ಆಚರಿಸಲಾಗುತ್ತಿದೆ ಎಂಬ ಪ್ರತೀತಿ ಇದೆ.
ಬಕ್ರಿದ್ ಹಬ್ಬದಲ್ಲಿ ಮುಖ್ಯವಾಗಿ ಮುಸ್ಲಿಮರು ದಾನ ಧರ್ಮಗಳು ಮಾಡುತ್ತಾರೆ. ಬಕ್ರಿದ್ ನಲ್ಲಿ ನೀಡುವ ಬಲಿಯಲ್ಲಿ ಮೂರು ಭಾಗಗಳು ಮಾಡಲಾಗುತ್ತದೆ ಒಂದು ಭಾಗವನ್ನು ತಾವೇ ಇಟ್ಟುಕೊಂಡು, ಉಳಿದ ಎರಡು ಭಾಗಗಳಲ್ಲಿ ಒಂದು ಭಾಗವನ್ನು ಸಂಬಂಧಿಕರಿಗೆ ಇನ್ನೊಂದು ಭಾಗ ಅಶಕ್ತರಿಗೆ ನೀಡುತ್ತಾರೆ.
ಇತರನಾಗಿ ಬಕ್ರೀದ್ ಹಬ್ಬವನ್ನು ಪ್ರತಿ ವರ್ಷ ಗ್ರಾಮದಲ್ಲಿ ಆಚರಿಸಲಾಗುತ್ತದೆ.
ಹಬ್ಬದ ಆಚರಣೆಯಲ್ಲಿ 1,) ಗಣಿ ಮುಲ್ಲಾ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷರು 2)ಶಕೀಲ್ ಅಹಮದ್ ಗುಡ್ನಾಳ ಪತ್ರಕರ್ತರು3( ಆದಮ್ ಸಾಬ ಡವಳಗಿ 4)ಲಾಲಮುನ್ನ ಮುಲ್ಲಾ 5)ಮಮ್ಮದ್ ಇಸ್ಮಾಯಿಲ್ ನಾಯ್ಕೋಡಿ ಅಂಜುಮನ್ ಕಮಿಟಿಯ ಸದಸ್ಯ6) ನಜೀರ್ ಗುಡ್ನಾಳ ಕಾಂಗ್ರೆಸ್ ಮುಖಂಡರು ಇಸ್ಲಾಂ ಕಮಿಟಿಯ ಆಲೀಮ್ ಆದಂತಹ ನೋ ದಾವೂದ ನಾಯ್ಕೋಡಿ ಅನೇಕರು ಉಪಸ್ಥಿತರಿದ್ದರು.
ವರದಿ: Krishna H. Rathod.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!