Ad imageAd image

ನರೇಗಾ ಯೋಜನೆಯಡಿ ಕೆಲಸ ನೀಡದ ಹಲಗತ್ತಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ!

Bharath Vaibhav
ನರೇಗಾ ಯೋಜನೆಯಡಿ ಕೆಲಸ ನೀಡದ ಹಲಗತ್ತಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ!
WhatsApp Group Join Now
Telegram Group Join Now

ರಾಮದುರ್ಗ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕಳೆದ ಹಲವು ತಿಂಗಳುಗಳಿಂದ ಕೆಲಸ ನೀಡದ ಹಿನ್ನೆಲೆಯಲ್ಲಿ ಇಂದು ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮ ಪಂಚಾಯಿತಿಗೆ ನೂರಾರು ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದರು.

ಪ್ರತಿಭಟನಾ ಕಾರ್ಮಿಕರು ಮಾತನಾಡಿ, “ನಾವು ಕಳೆದ ತಿಂಗಳುಗಳಿಂದ ನರೇಗಾ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದರಿಂದ ನಮ್ಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಬೇರೆ ಯಾವುದೇ ಕೆಲಸ ಸಿಗದೆ ನಾವು ಸಂಕಷ್ಟದಲ್ಲಿದ್ದೇವೆ” ಎಂದು ತಮ್ಮ ಅಳಲನ್ನು ತೋಡಿಕೊಂಡರು.

ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಪ್ರತಿ ವರ್ಷ ಏಪ್ರಿಲ್ 24 ರಂದು ಆಚರಿಸಲಾಗುತ್ತದೆ. ಈ ದಿನವು 1992 ರ 73 ನೇ ಸಂವಿಧಾನ ತಿದ್ದುಪಡಿಯ ಮಹತ್ವವನ್ನು ನೆನಪಿಸುತ್ತದೆ, ಇದು ಭಾರತದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡಿತು. ಈ ದಿನದ ಆಚರಣೆಯ ಮುಖ್ಯ ಉದ್ದೇಶವೆಂದರೆ ಗ್ರಾಮ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣದ ಮಹತ್ವವನ್ನು ಜನರಿಗೆ ತಿಳಿಸುವುದು ಮತ್ತು ಸ್ಥಳೀಯ ಆಡಳಿತದಲ್ಲಿ ಪಂಚಾಯತ್‌ಗಳ ಪಾತ್ರವನ್ನು ಎತ್ತಿ ತೋರಿಸುವುದು.

ಆದರೆ ಹಲಗತ್ತಿ ಗ್ರಾಮ ಪಂಚಾಯತಿಯ ಕಾರ್ಯವೈಖರಿಯನ್ನು ನೋಡಿದರೆ ರಾಷ್ಟ್ರೀಯ ಪಂಚಾಯತ್ ರಾಜ್ 1992 ರ 73 ನೇ ಸಂವಿಧಾನ ತಿದ್ದುಪಡಿಯ ಮಹತ್ವವದ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವಂತೆ ಕಾಣುತ್ತದೆ ಇಲ್ಲಿನ ಆಡಳಿತ.

ನೋಡಿ ವೀಕ್ಷಕರೆ ರಾಮದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಲಗತ್ತಿ ಗ್ರಾಮ ಪಂಚಾಯತಿ ಯಲ್ಲಿ..

ಒಟ್ಟು ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರು ಪಡೆದುಕೊಂಡಿರುವ ಜಾಬ್ ಕಾರ್ಡ್ ಗಳ ಸಂಖ್ಯೆ : 860 ಇದರಲ್ಲಿ ಇರುವ ಕೂಲಿ ಕಾರ್ಮಿಕರ ಸಂಖ್ಯೆ ಒಟ್ಟು 2261

ಆದರೆ ಇದರಲ್ಲಿ ಇರುವ ಸಕ್ರಿಯ ಜಾಬ್ ಕಾರ್ಡಗಳ ಸಂಖ್ಯೆ 566 ಮಾತ್ರ ಹಾಗೂ 1024 ಜನಗಳು ಮಾತ್ರ ಕೆಲಸ ಮಾಡಲು ಸಕ್ರಿಯವಾಗಿದ್ದರೆ ಆದರೆ ಇನ್ನೂ ಉಲ್ಲಿದ ಕೂಲಿ ಕಾರ್ಮಿಕರನ್ನು ಜಾಬ್ ಕಾರ್ಡ್ ದಿಂದಾ ಕೈ ಬಿಟ್ಟ ಅಧಿಕಾರಿಗಳು…

ಇಂತಹ ಅಧಿಕಾರಿಗಳಿಂದ ಗ್ರಾಮಗಳು ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ? ಇದೇನಾ ಇವರ ಅಭಿವೃದ್ಧಿ ಕಾರ್ಯ?

ಈ ಘಟನೆಯು ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರ ಸಂಕಷ್ಟವನ್ನು ಎತ್ತಿ ತೋರಿಸುತ್ತದೆ. ಸರ್ಕಾರವು ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಉದ್ಯೋಗವನ್ನು ಒದಗಿಸಬೇಕಿದೆ.

ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸ್ತಾರೋ ಅಥವಾ ಇಲ್ಲೋ ಕಾದು ನೋಡೋಣ .

ವರದಿ :ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
Share This Article
error: Content is protected !!