Ad imageAd image

ಬಲಕುಂದಿ ತಾಂಡಾ ಸರ್ಕಾರಿ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ.

Bharath Vaibhav
ಬಲಕುಂದಿ ತಾಂಡಾ ಸರ್ಕಾರಿ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ.
WhatsApp Group Join Now
Telegram Group Join Now

ಇಳಕಲ್:-2024-25 ನೇ ಸಾಲಿನ ಇಳಕಲ್ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟವು ಬಲಕುಂದಿ ಗ್ರಾಮದಲ್ಲಿ ಇತ್ತೀಚಿಗೆ ಜರುಗಿದ್ದು, ಈ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಹಲವಾರು ವಿಭಾಗಗಳಲ್ಲಿ ಉತ್ತಮ ಪ್ರದರ್ಶನಗೈದು ಪ್ರಶಸ್ತಿ ಪಡೆಯುವುದರೊಂದಿಗೆ ಸಮಗ್ರ ವೀರಾಗ್ರಣಿ ಶಾಲೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಗುಂಪು ಆಟಗಳಲ್ಲಿ

ಬಾಲಕರ ಕಬಡ್ಡಿ -ಪ್ರಥಮ ಸ್ಥಾನ
ಬಾಲಕಿಯರ ಕಬಡ್ಡಿ -ಪ್ರಥಮ ಸ್ಥಾನ
ಬಾಲಕರ ಖೋ ಖೋ -ಪ್ರಥಮ ಸ್ಥಾನ
ಬಾಲಕಿಯರ ಖೋ ಖೋ -ಪ್ರಥಮ ಸ್ಥಾನ
ಬಾಲಕಿಯರ ರೀಲೆ-ದ್ವೀತೀಯ ಸ್ಥಾನ

ಹಾಗೂ ವೈಯಕ್ತಿಕ ಆಟಗಳಲ್ಲಿ
ಬಾಲಕಿಯರ ವಿಬಾಗದಲ್ಲಿ –
ಚಕ್ರ ಎಸೆತ- ಸುಪ್ರೀತಾ ರಾಠೋಡ ಪ್ರಥಮ ಸ್ಥಾನ
ಗುಂಡು ಎಸೆತ- ಸುಪ್ರೀತಾ ರಾಠೋಡ ಪ್ರಥಮ ಸ್ಥಾನ
ಉದ್ದ ಜಿಗಿತ-ಸುಪ್ರೀತಾ ರಾಠೋಡ ಪ್ರಥಮ ಸ್ಥಾನ

ಬಾಲಕರ ವಿಭಾಗದಲ್ಲಿ ಚಕ್ರ ಎಸೆತ-ಸಚಿನ್ ನಾಯಕ ಪ್ರಥಮ ಸ್ಥಾನ
ಗುಂಡು ಎಸೆತ- ಸಚಿನ್ ನಾಯಕ ಪ್ರಥಮ ಸ್ಥಾನ
600 ಮೀ ಓಟ- ಸಂಜಯ ಚವ್ಹಾಣ ದ್ವಿತೀಯ ಸ್ಥಾನ
ಬಾಲಕಿಯರ 400 ಮೀ ಓಟ- ಸುಪ್ರೀತಾ ಚವ್ಹಾಣ ದ್ವಿತೀಯ ಸ್ಥಾನ
ಬಾಲಕಿಯರ ಎತ್ತರ ಜಿಗಿತ-ಶ್ರೀದೇವಿ ರಾಠೋಡ ದ್ವೀತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ

ಎಂದು ಶಾಲೆಯ ಮುಖ್ಯ ಗುರುಗಳಾದ ಪರಶುರಾಮ ಪಮ್ಮಾರ ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಕ್ರೀಡಾ ಸಮವಸ್ತ್ರ ಕೊಡುಗೆ ನೀಡಿದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ದೊಡ್ಡಪ್ಪ ಎಂ ಚವ್ಹಾಣ ರವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.ಉತ್ತಮ ಪ್ರದರ್ಶನ ನೀಡಿ ಶಾಲೆಯ ಕೀರ್ತಿ ಹೆಚ್ಚಿಸಿದ ಮಕ್ಕಳಿಗೆ ಹಾಗೂ ಮಾರ್ಗದರ್ಶನ ಮಾಡಿದ ಶಾಲೆಯ ದೈಹಿಕ ಶಿಕ್ಷಕಿಯಾದ ಶ್ರೀಮತಿ ಆರ್ ಎಸ್ ಕೊಡಗಲಿ,ಮುತ್ತು ಬೀಳಗಿ,ಎ ಡಿ ಬಾಗವಾನ,ಪ್ರಸನ್ನ ಮೇಗಡಿ,ಗುರುಮಾತೆಯರಾದ ಜಿ ಕೆ ಮಠ,ಪಿ ಎಸ್ ಹೊಸೂರ,ಎಂ ಪಿ ಚೇಗೂರ,ಎಸ್ ಎಲ್ ಜೋಗಿನ,ಎಂ ಎನ್ ಅರಳಿಕಟ್ಟಿ,ಎಸ್ ಎಂ ಮಲಗಿಹಾಳ,ಸಾಯಿರಾ ಹೆರಕಲ್ ರವರಿಗೆ ಅಭಿನಂದನೆ ತಿಳಿಸಿದ್ದಾರೆ.

ವರದಿ:- ದಾವಲ್ ಸೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!