ಭಾಲ್ಕಿ:– ಪಟ್ಟಣದ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ನ.೮ ಶುಕ್ರವಾರ ದಿಂದ ಜಾತ್ರಾ ಉತ್ಸವ ೨೦೨೪ ನಡೆಯಲಿದೆ ಎಂದು ಫಾ| ರೋಕಿ ಡಿಸೋಜಾ ತಿಳಿಸಿದರು.ಪಟ್ಟಣದ ಬಾಲಯೇಸು ಪುಣ್ಯಕ್ಷೆತ್ರದಲ್ಲಿ ಬುಧವಾರ ನಡೆದ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆ ಹಾಗು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಬೀದರ, ಕಲಬುರಗಿ, ಯಾದಗೀರ, ವಿಜಯನಗರ ನಾಲ್ಕು ಜಿಲ್ಲೆಗಳ ಕ್ಯಾಥೊಲಿಕ್ ಕ್ರೆöÊಸ್ಥರನ್ನು ಸೇರಿಸುವ ಸಂಭ್ರಮದ ಹಬ್ಬ ಭಾಲ್ಕಿಯ ಬಾಲಯೇಸು ಜಾತ್ರಾ ಮಹೋತ್ಸವಾಗಿದೆ. ನವ್ಹೆಂಬರ ೮ ರಿಂದ ೧೦ ರ ವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಜಾತ್ರಾ ಮಹೋತ್ಸವ ಸಂಭ್ರಮದಿAದ ನಡೆಯುವುದು. ನ. ೮ ರಂದು ಶುಕ್ರವಾರ ಸಂಜೆ ೩ ಗಂಟೆಗೆ ಬಾಲಯೇಸುವಿನ ಭವ್ಯ ಮೆರಣಿಗೆ ಯೊಂದಿಗೆ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿಲಾಗುವುದು.
ಮೆರವಣಿಗೆಯು ಭಾಲ್ಕಿ ಪಟ್ಟಣದ ಅಂಬೇಡಕರ್ ವೃತ್ತದಿಂದ ಪ್ರಾರಂಭವಾಗಿ, ಮಹಾತ್ಮಾಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಸಾಗಿ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಸಮಾವೇಶಗೊಳ್ಳುವುದು. ನಂತರ ೫.೩೦ಕ್ಕೆ ನವೇನ ಪ್ರಾರ್ಥನೆ, ಸಂಜೆ ೬ ಗಂಟೆಗೆ ಬೀದರ ವಲಯದ ಮುಖ್ಯ ಗುರು ಫಾ ಕ್ಲೇರಿ ಡಿ ಸೋಜಾ ರವರಿಂದ ಸಾಂಭ್ರಮಿಕ ಬಲಿಪೂಜೆ, ೭.೩೦ಕ್ಕೆ ಅನ್ನದಾಸೋಹ, ೮ ಗಂಟೆಗೆ ಅಂತರ್ ಕ್ರೆöÊಸ್ತ ಪಂಗಡಗಳ ಭಜನಾ ಸ್ಪರ್ಧೆ ನಡೆಯುವವು.
ನ. ೯ ರಂದು ಶನಿವಾರ ಮುಂಜಾನೆ ೬.೩೦ ಗಂಟೆಗೆ ಭಜನೆ ಮತ್ತು ಪ್ರಾರ್ಥನೆ, ೭ ಗಂಟೆಗೆ ದಿವ್ಯ ಬಲಿಪೂಜೆ, ೮.೩೦ಕ್ಕೆ ಬೈಬಲ್ ಪಠಣ ಪ್ರವಚನ ಭಜನಾ ಕಾರ್ಯಕ್ರಮಗಳು ನಡೆಯುವವು. ೧೦ಕ್ಕೆ ದೇವರ ವಾಕ್ಯ, ೧೧ ಗಂಟೆಗೆ ದಾನಿಗಳಿಗೆ ಸನ್ಮಾನ, ೧೧.೩೦ಕ್ಕೆ ಸಾಂಭ್ರಮಿಕ ಬಲಿಪೂಜೆ, ೧.೩೦ಕ್ಕೆ ಅನ್ನದಾಸೋಹ, ೨.೩೦ಕ್ಕೆ ಪ್ರತಿಭಾ ಪುರಸ್ಕಾರ, ೪ ಗಂಟೆಗೆ ಹರಾಜು, ೪.೪೫ಕ್ಕೆ ದೇವರ ವಾಕ್ಯ, ೬ ಗಂಟೆಗೆ ಸಭಾ ಕಾರ್ಯಕ್ರಮಗಳು ನಡೆಯುವವು.
ನ.೧೦ ರಂದು ಭಾನುವಾರ ಬೆಳಿಗ್ಗೆ ೬/೩೦ ರಿಂದ ೩ ಗಂಟೆಯವರೆಗೆ ಭಜನೆ, ದಿವ್ಯ ಬಲಿಪೂಜೆ, ದೆವರವಾಕ್ಯ, ಸನ್ಮಾನ ಕಾರ್ಯಕ್ರಮ, ಹಬ್ಬದ ಸಾಂಭ್ರಮಿಕ ಬಲಿಪೂಜೆ, ಸನ್ಮಾನ ಕಾಯಕ್ರಮಗಳು ನಡೆಯುವವು ನಂತರ ಮದ್ಯಾನ್ಹ೩.೩೦ ಗಂಟೆಗೆ ಬೀದರ ಕ್ಷೇತ್ರದ ಸಂಸದ ಸಾಗರ ಖಂಡ್ರೆಯವರ ಉಪಸ್ಥಿತಯಲ್ಲಿ ಅಂತರ್ ಧರ್ಮೀಯ ಸಮಾಮಗ ಕಾರ್ಯಕ್ರಮ ನಡೆಯುವುದು.
ಈ ಕಾರ್ಯಕ್ರಮದ ಅಧ್ಯಕ್ಷೆತೆ ಗುಲಬರ್ಗಾ ಧರ್ಮಕ್ಷೇತ್ರದ ರಾಬರ್ಟ ಮೈಕಲ್ ಮಿರಾಂದ ವಹಿಸುವುರು. ಕಾರ್ಯಕ್ರಮದಲ್ಲಿ ಹುಲಸೂರಶ್ರೀ ಡಾ| ಶಿವಾನಂದ ಮಹಾಸ್ವಾಮಿಗಳು, ಪೇಶ್ ಇಮಾಮ್ ಗಡಿ ಮಜ್ಜಿದ್ ನ ಅಬ್ದೂಲ್ ಗಫೂರ್ ರಿಝಿವಿ, ಬ್ರಹ್ಮಕುಮಾರಿ ವಿಶ್ವಿವಿದ್ಯಾಲಯದ ರಾಧಾ ಬಹೆನ್, ಫಾ| ಕ್ಲೇರಿ ಡಿಸೋಜಾ, ಫಾ| ರೋಕಿ ಡಿಸೋಜಾ, ಸಿಸ್ಟರ್ ಸೆಲೆಸ್ಟಿನ್, ಎಮ್.ಡಿ.ರಫಿಯೋದಿನ್, ಶಂಭುಲಿAಗ ಕಾಮಣ್ಣ, ವೀರಣ್ಣ ಕುಂಬಾರ, ಸೋಮನಾಥಪ್ಪ ಅಸ್ಟೂರೆ, ಸಯ್ಯದ್ ಅಜಮೋದಿನ್ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸುವರು. ಹೆಚ್ಚಿನ ಸಂಖೆಯಲ್ಲಿ ಎಲ್ಲರೂ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ಪುನಿತರಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಫಾ| ರೋಷನ್ ಡಿಸೋಜಾ, ಡಾ| ಶ್ರೀನಿವಾಸ ಬೇಂದ್ರೆ, ಫಾ| ಸತೀಶ, ಫಾ| ಸಲ್ವಾದೋರ್ ಇದ್ದರು.
ವರದಿ:-ಸಂತೋಷ ಬಿಜಿ ಪಾಟೀಲ