ಪಹಲ್ಗಾಮ್ ದಾಳಿಯ ಪ್ರತಿಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್ ಉಗ್ರರ 9 ಅಡಗುತಾಣವನ್ನು ಹೊಡೆದುರುಳಿಸಿತ್ತು. ಇದೀಗ ಪಾಕ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.
ಭಾರತವು ಪಾಕ್ ಗೆ ನುಗ್ಗಿ ಉಗ್ರರ ಅಡಗುತಾಣವನ್ನು ಉಡೀಸ್ ಮಾಡಿತ್ತು, ಇದಕ್ಕೆ ಪ್ರತಿಯಾಗಿ ಪಾಕ್ ಸೇನೆಯು ಎಲ್‌ಒಸಿಯ ಗಡಿಯುದ್ಧಕ್ಕೂ ಶೆಲ್ ದಾಳಿ ನಡೆಸಿದ್ದು, ಇದರಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೆ, 35 ಜನ ಗಾಯಗೊಂಡಿದ್ದರು.
ಇದೀಗ ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುತ್ತಿರುವ ಮತ್ತು ಬೆಂಬಲಿಸುತ್ತಿರುವ ಪಾಕಿಸ್ತಾನವನ್ನು ಒಂದು ಕಡೆ ಭಾರತ ಮತ್ತು ಇನ್ನೊಂದು ಕಡೆ ಬಲೂಚ್ ಲಿಬರೇಶನ್ ಆರ್ಮಿ (BLA) ಗುರಿಯಾಗಿಸಿಕೊಂಡಿವೆ.
ಅದರಂತೆ ಬಲೂಚ್ ಲಿಬರೇಶನ್ ಆರ್ಮಿಯ ವಿಶೇಷ ಯುದ್ಧ ತಂತ್ರದ ಕಾರ್ಯಾಚರಣೆ ದಳವು ಮಚ್ಚುಂಡ್ ಪ್ರದೇಶದ ಪಾಕ್ ಸೇನಾ ವಾಹನದ ಮೇಲೆ ರಿಮೋಟ್ ಕಂಟ್ರೋಲ್ ಮೂಲಕ ಐಇಡಿ ಬಾಂಬ್ ಸ್ಪೋಟಿಸಿದ್ದು, ಇದರಲ್ಲಿ 12 ಜನ ಪಾಕ್ ಸೈನಿಕರು ಸತ್ತಿದ್ದರೆ, ಮತ್ತೊಂದು ದಾಳಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ.




