Ad imageAd image

ಜ.23 ರಂದು ಬೆಂಗಳೂರಿನಲ್ಲಿ ಸಂವಿಧಾನ ವರ್ಸಸ್ ಮನುವಾದ ಹೋರಾಟ: ಬಾಣಸಂದ್ರ ಕೃಷ್ಣಮೂರ್ತಿ

Bharath Vaibhav
ಜ.23 ರಂದು ಬೆಂಗಳೂರಿನಲ್ಲಿ ಸಂವಿಧಾನ ವರ್ಸಸ್ ಮನುವಾದ ಹೋರಾಟ: ಬಾಣಸಂದ್ರ ಕೃಷ್ಣಮೂರ್ತಿ
WhatsApp Group Join Now
Telegram Group Join Now

ತುರುವೇಕೆರೆ: ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜನವರಿ 23 ರಂದು ನಡೆಯಲಿರುವ ಸಂವಿಧಾನ ವರ್ಸಸ್ ಮನುವಾದ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಸುಮಾರು 100 ಕ್ಕೂ ಅಧಿಕ ಮಂದಿ ತೆರಳುತ್ತಿರುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ಬಾಣಸಂದ್ರ ಕೃಷ್ಣಮೂರ್ತಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಅಂಬೇಡ್ಕರ್ ಅವರ ಹೆಸರು ಹೇಳುವ ಬದಲು ದೇವರ ಹೆಸರೇಳಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗ ಪ್ರಾಪ್ತವಾಗುತ್ತಿತ್ತು ಎಂದು ಮಾತುಗಳು ಅಂಬೇಡ್ಕರ್ ಅವರಿಗೆ ಹಾಗೂ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಕೂಡಲೇ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ದಲಿತ ಯುವ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ದ ಬಿಜೆಪಿ ನಿರಂತರವಾಗಿ ಪಿತೂರಿ ರಾಜಕಾರಣವನ್ನು ನಡೆಸುತ್ತಿದೆ. ದಲಿತ ನಾಯಕರ ವಿರುದ್ಧದ ಪಿತೂರಿ ರಾಜಕಾರಣವನ್ನು ಹಿಮ್ಮೆಟ್ಟಿಸಲು, ಅಂಬೇಡ್ಕರ್ ಅವರ ಸಂವಿಧಾನವನ್ನು, ಅಂಬೇಡ್ಕರ್ ಅವರ ವಾದವನ್ನು ಉಳಿಸುವುದಕ್ಕಾಗಿ ಈ ಹೋರಾಟ ನಡೆಯುತ್ತಿದೆ. ಆದ್ದರಿಂದ ದಲಿತ ಸಂಘಟನೆ ಸೇರಿದಂತೆ ಅಂಬೇಡ್ಕರ್ ವಾದವನ್ನು ಒಪ್ಪುವ ಎಲ್ಲಾ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲೊಳ್ಳಬೇಕೆಂದು ಮನವಿ ಮಾಡಿದರು.

ತುರುವೇಕೆರೆ ತಾಲ್ಲೂಕಿನಲ್ಲಿ ದಲಿತರಿಗೆ ಸ್ಮಶಾನದ ಸಮಸ್ಯೆ ಎದುರಾಗಿದ್ದು, ದಲಿತ ಸಮುದಾಯದವರು ಮರಣಹೊಂದಿದಾಗ ಅವರ ಅಂತಿಮ ಕಾರ್ಯ ನಡೆಸಲು ಕಷ್ಟಪಡಬೇಕಾದ ಪರಿಸ್ಥಿತಿ ಬಂದಿದೆ. ಕೂಡಲೇ ಸಂಬಂಧಿಸಿದ ತಾಲೂಕು ಆಡಳಿತ ಸಮುದಾಯಕ್ಕೆ ಸ್ಮಶಾನ ಗುರುತಿಸಿ ಅನುಕೂಲ ಮಾಡಿಕೊಡಬೇಕೆಂದರು. ಪತ್ರಕರ್ತ ಸಮ್ಮೇಳನಕ್ಕಾಗಿ ಹಾಕಿಸಿದ್ದ ಫ್ಲೆಕ್ಸ್ ಅಲ್ಲಿ ಯಾರೋ ಕಿಡಿಗೇಡಿಗಳು ಸಮುದಾಯಕ್ಕೆ ಸೇರಿದ ಪತ್ರಕರ್ತ ಸಚಿನ್ ಅವರ ಭಾವಚಿತ್ರವನ್ನು ಹರಿದು ಹಾಕಿದ್ದು, ಕೂಡಲೇ ಪೊಲೀಸ್ ಇಲಾಖೆ ಸಂಬಂಧಿಸಿದ ಕಿಡಿಗೇಡಿಗಳನ್ನು ಹುಡುಕಿ ಕಾನೂನು ರೀತಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಗೋಷ್ಟಿಯಲ್ಲಿ ಹಿರೇಡೊಂಕೀಹಳ್ಳಿ ರಾಮಣ್ಣ, ಮಾಯಸಂದ್ರ ಸುಬ್ರಮಣ್ಯ, ಬೀಚನಹಳ್ಳಿ ರಾಮಣ್ಣ, ಮಹದೇವಯ್ಯ, ರಾಮಚಂದ್ರಯ್ಯ, ರಂಗಸ್ವಾಮಿ, ಲೋಕೇಶ್, ಮಧು, ಪ್ರಸನ್ನ, ತುರುವೇಕೆರೆಯ ಸುನಿಲ್, ಶಿವಣ್ಣ, ಬಿಗನೇನಹಳ್ಳಿ ಪುಟ್ಟರಾಜು, ಹೊನ್ನೇನಹಳ್ಳಿ ಕೃಷ್ಣಪ್ಪ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!